ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ನಾಯಿ ಮೇಲೆ ಚಿರತೆ ದಾಳಿ: ಸ್ಥಳೀಯರಲ್ಲಿ ಆತಂಕ

ಮುಲ್ಕಿ: ಬಳಕುಂಜೆ ಗ್ರಾಮಪಂಚಾಯತ್ ವ್ಯಾಪ್ತಿಯ ಕೊಲ್ಲೂರುಪದವಿನಲ್ಲಿ ಚಿರತೆ ಕಾಟ ಹೆಚ್ಚಾಗಿದ್ದು ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ವಾಹನ ಸವಾರರಿಗೆ ರಾತ್ರಿ ಸಮಯದಲ್ಲಿ ಚಿರತೆ ಕಂಡು ಬಂದಿದೆ. ಬುಧವಾರ ಮುಂಜಾನೆ ಕೊಲ್ಲೂರು ಪದವು ಸಮೀಪದ ಸುವರ್ಣ ಸಿರಿಯ ಕುಟ್ಟಿ ಪೂಜಾರಿಯವರ ಮನೆಯ ನಾಯಿಯ ಮೇಲೆ ಚಿರತೆ ದಾಳಿ ಮಾಡಿದ್ದು ನಾಯಿಯ ಕುತ್ತಿಗೆಯ ಬಾಗದಲ್ಲಿ ಗಾಯಗಳಾಗಿದೆ.

ಮುಂಜಾನೆ ಸುಮಾರು 4 ಗಂಟೆಯ ಸಂದರ್ಭ ನಾಯಿ ಅಳುದನ್ನು ಗಮನಿಸಿದ ಮನೆಯವರು ಎದ್ದು ನೋಡುವಾಗ ಚಿರತೆ ನಾಯಿಯನ್ನು ಬಿಟ್ಟು ಓಡಿದೆ. ನಾಯಿಯ ಕುತ್ತಿಗೆ ಭಾಗದಲ್ಲಿ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗಿದೆ. ಸಮೀಪದಲ್ಲಿ ಚಿರತೆ ಹೆಜ್ಜೆ ಗುರುತು ಕಂಡು ಬಂದಿದ್ದು ಸ್ಥಳೀಯರು ಭಯಭೀತರಾಗಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಎಚ್ಚೆತ್ತು ಸ್ಥಳೀಯರ ಆತಂಕ ನಿವಾರಿಸಬೇಕು ಎಂದು ಆಗ್ರಹಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

04/05/2022 02:49 pm

Cinque Terre

11.95 K

Cinque Terre

1

ಸಂಬಂಧಿತ ಸುದ್ದಿ