ಉಡುಪಿ: ಉಡುಪಿಯಲ್ಲಿ ವಾಸ್ತವ್ಯ ಹೂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು " ಮಣ್ಣು ಉಳಿಸಿ" ಅಭಿಯಾನಕ್ಕೆ ಚಾಲನೆ ನೀಡಿದರು. ಮಣಿಪಾಲದ ಕಂಟ್ರಿ ಇನ್ ಹೊಟೇಲಿನಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ ,ಸದ್ಗುರು ನಿಸರ್ಗದ ರಕ್ಷಣೆಗೆ ದೊಡ್ಡ ಅಭಿಯಾನ ಮಾಡುತ್ತಿದ್ದಾರೆ.ಸೇವ್ ಕಾವೇರಿ ,ಮಣ್ಣು ಉಳಿಸಿ ಅಭಿಯಾನವನ್ನು ಸದ್ಗುರು ಮಾಡುತ್ತಿದ್ದಾರೆ.
ಮಣ್ಣಿಗೂ ಮನುಷ್ಯರಿಗೂ ನೇರವಾದ ಸಂಬಂಧವಿದೆ.ನಮ್ಮ ಬದುಕು, ಆಹಾರ ಮಣ್ಣಿಗೆ ಆಧಾರಿತವಾಗಿದೆ.ತಾಯಿ ಗರ್ಭ ಮತ್ತು ಭೂಗರ್ಭ ಬಹಳ ಪವಿತ್ರವಾದದ್ದು. ಭೂಗರ್ಭವನ್ನು ಚೆನ್ನಾಗಿ ಕಾಪಾಡಲು ಮಣ್ಣಿನ ರಕ್ಷಣೆ ಅವಶ್ಯಕತೆ ಇದೆ.ಭೂಮಿ ಮತ್ತು ಮಣ್ಣು ಕಾಪಾಡುವುದು ಮನುಷ್ಯನ ಆದ್ಯ ಕರ್ತವ್ಯ ಎಂದು ಹೇಳಿದರು.
Kshetra Samachara
12/04/2022 10:37 am