ಬಜಪೆ: ಇಲ್ಲಿನ ಬಸ್ ನಿಲ್ದಾಣದ ಬಳಿ ಒಣಗಿದ ಸ್ಥಿತಿಯಲ್ಲಿದ್ದ ಬೃಹತ್ ಗಾತ್ರದ ದೇವದಾರು ಮರದ ಗೆಲ್ಲುಗಳನ್ನು ತೆರವು ಗೊಳಿಸುವ ಕಾರ್ಯವು ಭಾನುವಾರದಂದು ನಡೆಯಿತು.
ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಬಜಪೆ ಪಟ್ಟಣ ಪಂಚಾಯತ್‌ನ ಮನವಿಯ ಮೇರೆಗೆ ಅರಣ್ಯ ಇಲಾಖೆಯು ಮರದ ಗೆಲ್ಲುಗಳನ್ನು ತೆರವು ಮಾಡಿತ್ತು. ಮರದ ಬುಡವನ್ನು ಕೂಡ ತೆರವು ಗೊಳಿಸುವ ಕಾರ್ಯವು ಆಗಲಿದೆ. ಮರದ ಸಮೀಪ ಅನೇಕ ವಾಹನಗಳನ್ನು ಪ್ರತಿನಿತ್ಯವೂ ಪಾರ್ಕಿಂಗ್ ಮಾಡಲಾಗುತ್ತಿದ್ದು. ಒಣಗಿದ ಮರ ವಾಹನಿಗರಿಗೆ ಬಹಳಷ್ಟು ಅಪಾಯಕಾರಿಯಾಗಿತ್ತು. ಅಲ್ಲದೆ ಮುಖ್ಯ ರಸ್ತೆಯಲ್ಲಿ ಸಾಗುವಂತಹ ವಾಹನ ಸವಾರರಿಗೂ ಅಪಾಯ ಕಟ್ಟಿಟ್ಟ ಬುತ್ತಿಯಂತಾಗಿತ್ತು. ಇದೀಗ ಮರ ತೆರವು ಮಾಡಿದ್ದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ನಿಟ್ಟುಸಿರುಬಿಡುವಂತಾಗಿದೆ.
Kshetra Samachara
28/03/2022 12:45 pm