ಬಜಪೆ:ತೋಟದಲ್ಲಿ ಮೇಯಲು ಕಟ್ಟಿದ್ದ ದನದ ಕರುವೊಂದನ್ನು ಚಿರತೆಯೊಂದು ಕೊಂದು ಅರ್ಧಂಬರ್ದ ತಿಂದು ಹಾಕಿದ ಘಟನೆ ಬಡಗ ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ಕನಕ ಬೆಟ್ಟು ಎಂಬಲ್ಲಿ ನಡೆದಿದೆ.ಕರುಣಾಕರ ವನಾಲ್ ಎಂಬವರ ತೋಟದಲ್ಲಿ ಕಟ್ಟಿಹಾಕಲಾಗಿದ್ದ ಕರುವನ್ನು ಚಿರತೆಯು ಕೊಂದು ಹಾಕಿದೆ.
ಕಳೆದ ಕೆಲವು ತಿಂಗಳುಗಳಿಂದ ದಡ್ಡಿ,ಮಂಜಣಕಟ್ಟೆ,ತಿಪ್ಲಬೆಟ್ಟು ಮತ್ತು ಕನಕಬೆಟ್ಟು ಪರಿಸರದಲ್ಲಿ ಚಿರತೆಯ ಕಾಟ ದಿನೇ ದಿನೇ ಹೆಚ್ಚಾಗುತ್ತಿದೆ.ಪರಿಸರದ ಹಲವು ಮನೆಯ ಸಾಕು ನಾಯಿಗಳು ಚಿರತೆಯ ಪಾಲಾಗಿದ್ದು,ಗ್ರಾಮಸ್ಥರನ್ನು ಭಯಭೀತರನ್ನಾಗಿಸಿದೆ. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.ಅಲ್ಲದೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಶೀಘ್ರದಲ್ಲೇ ಅರಣ್ಯ ಇಲಾಖೆಯವರು ಚಿರತೆಯನ್ನು ಸೆರೆ ಹಿಡಿಯುವ ಕಾರ್ಯವನ್ನು ಮಾಡಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Kshetra Samachara
01/03/2022 07:10 pm