ಕಾಪು: ಕರಾವಳಿಯಲ್ಲಿ ಮಂಜು ಮುಸುಕಿದ ವಾತಾವರಣ ಸೋಮವಾರ ಕಂಡು ಬಂದಿದೆ.
ದಿನದಿಂದ ದಿನಕ್ಕೆ ಬದಲಾಗುತ್ತಿರುವ ವಾತಾವರಣ. ಒಂದು ದಿನ ಚಳಿ, ಮರುದಿನ ಸೆಕೆ ಹೀಗೆ ವಾತಾವರಣ ಬದಲಾಗುತ್ತಿರುವುದರಿಂದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಆಗುತ್ತಿದೆ. ಇದೀಗ ಮುಂಜಾನೆ ಸಮಯ ರಾಷ್ಟ್ರೀಯ ಹೆದ್ದಾರಿ ಎಲ್ಲೆಡೆ ಮಲೆನಾಡಿನಂತೆ ಮಂಜು ಮುಸುಕಿದ ವಾತಾವರಣ ಸೃಷ್ಟಿಯಾಗಿದ್ದು, ವಾಹನ ಸವಾರರಿಗೂ ತೊಡಕುಂಟು ಮಾಡುತ್ತಿದ್ದು, ರಾತ್ರಿ ಸಮಯದಂತೆ ವಾಹನಗಳ ದೀಪ ಉರಿಸಿಕೊಂಡು ನಿಧಾನಗತಿಯಲ್ಲಿ ಹೆದ್ದಾರಿಯಲ್ಲಿ ಸಾಗಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣಗೊಂಡಿದೆ.
ಹತ್ತಿರದಲ್ಲೂ ಒಬ್ಬರ ಮುಖ ಒಬ್ಬರಿಗೆ ಕಾಣದಂತೆ ದಟ್ಟ ಮಂಜು ರಾಷ್ಟ್ರೀಯ ಹೆದ್ದಾರಿ ಪಡುಬಿದ್ರಿ ಉಚ್ಚಿಲ, ಕಾಪು ಎಲ್ಲೆಡೆ ಕಂಡು ಬಂದಿದೆ.
Kshetra Samachara
21/02/2022 11:08 am