ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ತುಂಡಾದರೂ ಫಲ ಕೊಟ್ಟ ಬಾಳೆ ಗಿಡದ ದಿಮ್ಮಿ: ಪ್ರಕೃತಿಯ ವೈಶಿಷ್ಟ್ಯ

ಸುಳ್ಯ: ಕೆಲವು ಬಾರಿ ಪ್ರಕೃತಿಯಿಂದ ವಿವಿಧ ಅಚ್ಚರಿಗಳು ಕಾಣಸಿಗುತ್ತದೆ. ಅದೇ ರೀತಿಯ ಘಟನೆಯೊಂದು ಇದೀಗ ಸುಳ್ಯದಲ್ಲಿ ಕಾಣಸಿಕ್ಕಿದೆ. ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದಲ್ಲಿ ವಕೀಲ ದೀಪಕ್ ಕುತ್ತಮೊಟ್ಟೆ ಎಂಬುವವರ ಮನೆಯ ತೋಟದಲ್ಲಿ ಕಳೆದ ಆರು ತಿಂಗಳ ಹಿಂದೆ ಕಡಿದ ಬಾಳೆಗಿಡದ ದಿಮ್ಮಿಯಲ್ಲಿ ಬಾಳೆಗೊನೆ ಬಿಟ್ಟಿದ್ದು ನೋಡುಗರಿಗೆ ಅಚ್ಚರಿ ಮೂಡಿಸಿದೆ.

ಫೆಬ್ರವರಿ 5ರಂದು ತೋಟದ ಕೆಲಸಕ್ಕೆಂದು ಹೋದ ಕಾರ್ಮಿಕರು ಈ ದೃಶ್ಯ ಕಂಡಿದ್ದು ಆಶ್ಚರ್ಯ ಚಕಿತರಾಗಿ ತಮ್ಮ ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ಕಿಸಿ ತಂದು ದೀಪಕ್ ಅವರಿಗೆ ತೋರಿಸಿದ್ದಾರೆ. ಗೊನೆಯಲ್ಲಿ ಸುಮಾರು ನಲವತ್ತಕ್ಕೂ ಹೆಚ್ಚು ಕಾಯಿಗಳು ಇದ್ದು ಕದಳಿ ಬಾಳೆಗೆ ಸೇರಿದ ಗಿಡವಾಗಿದೆ ಎಂದು ದೀಪಕ್‌ರವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

06/02/2022 08:57 am

Cinque Terre

8.09 K

Cinque Terre

0

ಸಂಬಂಧಿತ ಸುದ್ದಿ