ಮುಲ್ಕಿ: ಕಿನ್ನಿಗೋಳಿ ಸಮೀಪದ ಉಲ್ಲಂಜೆ ಬ್ರಹ್ಮರ ಗುಡಿ ಸಮೀಪ ಮುಖ್ಯರಸ್ತೆಯಲ್ಲಿ ಕಳೆದೆರಡು ದಿನಗಳ ಹಿಂದೆ ಕಾಡುಕೋಣ ಪ್ರತ್ಯಕ್ಷವಾಗಿದೆ.
ಬೆಳಿಗ್ಗೆ 3.30 ಕ್ಕೆ ಈ ರಸ್ತೆಯಲ್ಲಿ ವಾಹನ ಸಂಚಾರಿಗಳಿಗೆ ಕಾಣಸಿಕ್ಕಿದ್ದು, ತಮ್ಮ ಮೊಬೈಲ್ ನಲ್ಲಿ ಓಡುತ್ತಿರುವ ಕಾಡುಕೋಣವನ್ನು ಸೆರೆಹಿಡಿದ್ದಿದ್ದಾರೆ,
ಕಳೆದ ಕೆಲ ದಿನಗಳ ಹಿಂದೆ ಕಿನ್ನಿಗೋಳಿ ಪರಿಸರದಲ್ಲಿ ಚಿರತೆ ತಿರುಗಾಟ ಕಂಡು ಬೆಚ್ಚಿ ಬಿದ್ದಿದ್ದ ಜನ ಇದೀಗ ಕಾಡುಕೋಣದ ಓಡಾಟದ ಬಗ್ಗೆ ಭಯಭೀತರಾಗಿದ್ದು ಕೂಡಲೇ ಅರಣ್ಯಾಧಿಕಾರಿಗಳು ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
Kshetra Samachara
04/02/2022 06:07 pm