ಕಾರ್ಕಳ: ಕಾರ್ಕಳ ತಾಲೂಕಿನಲ್ಲಿ ಜಾನುವಾರುಗಳ ಕಾಲುಬಾಯಿ ರೋಗ ಹೆಚ್ಚುತ್ತಲೇ ಇದ್ದು ಆತಂಕಕ್ಕೆ ಕಾರಣವಾಗಿದೆ.ಕಳೆದ ಕೆಲ ದಿನಗಳಿಂದ ಕಾರ್ಕಳ ನಗರದ ಆಸುಪಾಸಿನಲ್ಲೇ ಐವತ್ತಕ್ಕೂ ಅಧಿಕ ಜಾನುವಾರುಗಳು ಈ ರೋಗಕ್ಕೆ ಬಲಿಯಾಗಿವೆ.ತೆಳ್ಳಾರು, ಮಿಯಾರು, ದುರ್ಗಾ ಮೊದಲಾದ ಕಡೆಗಳಲ್ಲಿ ಕಾಲು ಬಾಯಿ ರೋಗದ ತೀವ್ರತೆ ಹೆಚ್ಚಾಗಿ ಕಂಡುಬಂದಿದೆ.
ಈ ಕಾಯಿಲೆಯಾದರೆ ಜಾನುವಾರುಗಳ ಬಾಯಿಯಲ್ಲಿ ಮತ್ತು ಗೊರಸಿನ ಸಂಧಿಯಲ್ಲಿ ಹುಣ್ಣುಗಳು ಕಾಣಿಸಿಕೊಳ್ಳುತ್ತವೆ.ಹೀಗಾಗಿ ಜಾನುವಾರುಗಳು ಆಹಾರ ಸೇವಿಸಲು ಆಗದೆ ಯಾತನೆ ಪಡುತ್ತವೆ.ಮಾತ್ರವಲ್ಲ ,ರೋಗ ಬಂದು ಐದಾರು ದಿನಗಳಲ್ಲೇ ಹಸುಗಳು ಸಾವನ್ನಪ್ಪುತ್ತವೆ.
ಪಶು ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು ,ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
Kshetra Samachara
24/01/2022 03:43 pm