ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರದಲ್ಲಿ ಚಿರತೆ ಮರಿಗಳ ಕಾಟ: ಒಂದು ಬೋನಿಗೆ ,ಮತ್ತೊಂದು ಕಾಡಿನತ್ತ!

ಕುಂದಾಪುರ: ಕುಂದಾಪುರ ತಾಲೂಕಿನ ಕಂದಾವರ ಗ್ರಾಮಪಂಚಾಯತ್ ವ್ಯಾಪ್ತಿಯ ನೀರಿನ ಶುದ್ಧೀಕರಣ ಘಟಕದ ಆವರಣದಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಚಿರತೆ ಮರಿಯೊಂದನ್ನು ಬೋನಿಗೆ ಕೆಡವಿದೆ.ಚಿರತೆ ಓಡಾಟದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಕುಂದಾಪುರ ಅರಣ್ಯಾಧಿಕಾರಿಗಳ ತಂಡವು ,ಅಂದಾಜು ಎರಡೂವರೆ ತಿಂಗಳು ಪ್ರಾಯದ ಹೆಣ್ಣು ಚಿರತೆ ಮರಿಯೊಂದನ್ನು ಸೆರೆಹಿಡಿದಿದೆ.ಆದರೆ ಇನ್ನೊಂದು ಮರಿ ತಪ್ಪಿಸಿಕೊಂಡಿದೆ.

ಕಾಡಿನ ಪಕ್ಕದಲ್ಲಿ ಈ ಶುದ್ಧೀಕರಣ ಘಟಕವಿದೆ ಘಟಕದಲ್ಲಿ ಏಳು ಮಂದಿ ಸಿಬ್ಬಂದಿಗಳಿದ್ದು ಸನಿಹದಲ್ಲೇ ವಸತಿಗೃಹವಿದೆ. ಈ ಪರಿಸರದಲ್ಲಿ ಚಿರತೆಗಳ ಉಪಟಳದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳ ಹಿಂದೆ ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನಿಟ್ಟಿತ್ತು. ಶುಕ್ರವಾರ ರಾತ್ರಿ ಚಿರತೆ ಕಂಡು ಬೆದರಿದ ಇಲ್ಲಿನ ಸಿಬ್ಬಂದಿ ಪುರಸಭಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು‌. ಬೆಳಿಗ್ಗೆ ಕಾರ್ಯಾಚರಣೆಗೆ ಆಗಮಿಸಿದ ಅರಣ್ಯಾಧಿಕಾರಿಗಳ ತಂಡಕ್ಕೆ ಒಂದು ಚಿರತೆ ಮರಿ ಸಿಕ್ಕಿದೆ. ಇನ್ನೊಂದು ಚಿರತೆ ಮರಿ ಕಾಡು ಹಾದಿಯಲ್ಲಿ ಕಣ್ತಪ್ಪಿಸಿ ಪರಾರಿಯಾಗಿದೆ.‌ ಸ್ಥಳದಲ್ಲಿ ಮಾಂಸದ ತುಂಡುಗಳು ಸಿಕ್ಕಿದ್ದು ಕೆಲವೇ ಹೊತ್ತಿನ ಅಂತರದಲ್ಲಿ ದೊಡ್ಡ ಚಿರತೆ ಓಡಾಟದ ಬಗ್ಗೆ ಪುರಾವೆಗಳು ಸಿಕ್ಕಿವೆ.

ಕಾರ್ಯಾಚರಣೆ ತಂಡದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಪರ್ಡ್ ಲೋಬೋ, ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಬಿ. ಉದಯ್, ಶರತ್ ಗಾಣಿಗ, ಹಸ್ತಾ, ಅರಣ್ಯ ರಕ್ಷಕರಾದ ಉದಯ್ ಕುಮಾರ್ ಶೆಟ್ಟಿ, ಅಶೋಕ್, ಅರಣ್ಯ ವೀಕ್ಷಕರಾದ ಸತೀಶ್, ರೋಶನ್ ಇದ್ದರು.

Edited By : Shivu K
Kshetra Samachara

Kshetra Samachara

15/01/2022 08:49 pm

Cinque Terre

17.62 K

Cinque Terre

0

ಸಂಬಂಧಿತ ಸುದ್ದಿ