ವಿಶೇಷ ವರದಿ: ರಹೀಂ ಉಜಿರೆ
ಉಡುಪಿ: ನಾಡಹಬ್ಬ ಪರ್ಯಾಯಕ್ಕೆ ಇನ್ನೇನು ಐದು ದಿನ ಬಾಕಿಯಿದೆ. ಕೊವೀಡ್ ಆತಂಕದ ನಡುವೆ ಪರ್ಯಾಯದ ಸಂಭ್ರಮಕ್ಕೆ ಉಡುಪಿಗೆ ಉಡುಪಿಯೇ ಶೃಂಗಾರ ಗೊಂಡಿದೆ.ಅದರೆ ಅನ್ನ ಸಂತರ್ಪಣೆಯ ಸ್ವಾದ ಹೆಚ್ಚಿಸುವ ವಾದಿರಾಜ ಸ್ವಾಮಿಗಳ ಪ್ರಸಾದವಾಗಿರುವ ಮಟ್ಟು ಗುಳ್ಳ ಅರ್ಪಿಸಲು ಕೊರತೆಯಾಗಿದೆ!
ವಾಯ್ಸ್ : ಉಡುಪಿಯ ಕಾಪು ತಾಲೂಕಿನ ಮಟ್ಟು ಪ್ರದೇಶದಲ್ಲಿ ಬೆಳೆಯುವ ವಿಶಿಷ್ಟ ತಳಿಯ ಬದನೆ ಮಟ್ಟು ಗುಳ್ಳ ಎಂದೇ ಖ್ಯಾತಿ ಪಡೆದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೇಟೆಂಟ್ ಪಡೆದುಕೊಂಡಿರುವ ಬದನೆ ತಳಿ ಇದು. ಮಟ್ಟು ಜನರಿಗೆ ಸ್ವಂತ ದುಡಿಮೆಗೆ ದಾರಿಯಾಗಲಿ ಎಂದು ವಾದಿರಾಜ ಸ್ವಾಮಿಗಳು ಮಟ್ಟು ಬದನೆ ತಳಿ ಬೀಜಗಳನ್ನು ಪ್ರಸಾದ ರೂಪದಲ್ಲಿ ನೀಡಿದರು ಅನ್ನೊದು ಪ್ರತೀತಿ. ಇಂದು ಮಟ್ಟು ಪ್ರದೇಶದ ನೂರಾರು ರೈತರು ಮಟ್ಟು ಬದನೆ ಬೆಳೆದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಬದನೆ ಕೃಷಿ ಆ ಭಾಗದ ಜೀವನವನ್ನು ಮೆಲ್ಮಟ್ಟಕ್ಕೆ ಏರಿಸಿದೆ ಅನ್ನುವುದು ಕೂಡ ಸುಳ್ಳಲ್ಲ.
ಮಟ್ಟು ಪ್ರದೇಶದ ರೈತರು ವರ್ಷದ ಮೊದಲ ಬೆಳೆಯನ್ನು ಕೃಷ್ಣಮಠಕ್ಜೆ ಅರ್ಪಿಸುವುದು ವಾಡಿಕೆ.ಪರ್ಯಾಯ ಮಹೋತ್ಸವಕ್ಕಂತೂ ಕ್ವಿಂಟಲ್ ಗಟ್ಟಳೆ ಮಟ್ಟು ಗುಳ್ಳ ಹೊರೆ ಕಾಣಿಕೆ ರೂಪದಲ್ಲಿ ಕೃಷ್ಣಮಠಕ್ಕೆ ಸಲ್ಲಿಕೆಯಾಗುತ್ತದೆ. ಹೀಗೆ ಕೃಷ್ಣಮಠಕ್ಕೆ ಅರ್ಪಿಸಿದ ಮಟ್ಟುಗುಳ್ಳ ,ಮಠದ ಅನ್ನಪ್ರಸಾದದ ರುಚಿ ಹೆಚ್ಚಿಸುತ್ತದೆ.ಎರಡು ವರ್ಷಕ್ಕೊಮ್ಮೆ ನಡೆಯುವ ಪರ್ಯಾಯಕ್ಕೆ ಲೋಡ್ ಗಟ್ಟಲೆ ಮಟ್ಟುಗುಳ್ಳ ವನ್ನು ಅರ್ಪಿಸುವ ಮೂಲಕ ಈ ಭಾಗದ ರೈತರು ಕೃಷ್ಣ ಭಕ್ತಿಯನ್ನು ಮೆರೆಯುತ್ತಾರೆ .ಅದರೆ ಈ ಬಾರಿ ಸಾಕಷ್ಟು ಮಟ್ಟು ಬದನೆ ಇಳುವರಿ ಇಲ್ಲದೆ ಅಲ್ಪ ಪ್ರಮಾಣದ ಕಾಣಿಕೆ ಸಲ್ಲಿಸಲು ಪರದಾಡುವಂತಾಗಿದೆ.
ಪ್ರಕೃತಿಯ ಮುನಿಸಿನಿಂದಾಗಿ ಈ ಪರ್ಯಾಯಕ್ಕೆ ಕೈ ತುಂಬ ಕಾಣಿಕೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಅನ್ನುವ ಕೊರಗು ಮಟ್ಟು ಭಾಗದ ರೈತರಾದ್ದಾಗಿದೆ. ಅದೇನೇ ಇರಲಿ, ಮಟ್ಟುಗುಳ್ಳದ ಸಾಂಬಾರು ಮತ್ತು ಗೊಜ್ಜು ಕೃಷ್ಣನ ಅನ್ನಪ್ರಸಾದದ ರುಚಿ ಹೆಚ್ಚಿಸುತ್ತದೆ ಎಂಬುದರಲ್ಲಿ ಎರಡು ಮಾತೇ ಇಲ್ಲ.
PublicNext
13/01/2022 07:31 pm