ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕಾರ್ನಾಡು ಗೇರುಕಟ್ಟೆ ಬಳಿ ಗುಡ್ಡೆಗೆ ಆಕಸ್ಮಿಕ ಬೆಂಕಿ

ಮುಲ್ಕಿ:ಮುಲ್ಕಿ ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕಾರ್ನಾಡು ಗೇರುಕಟ್ಟೆ ಬಳಿ ಮುಲ್ಕಿ ತಾಲೂಕು ಕಚೇರಿಗೆ ಮೀಸಲಿಟ್ಟ ಸುಮಾರು ಎರಡು ಎಕರೆ ಜಾಗಕ್ಕೆ ಆಕಸ್ಮಿಕ ಬೆಂಕಿ ತಗಲಿ ಧಗಧಗನೆ ಉರಿದು ಆತಂಕದ ವಾತಾವರಣ ಸೃಷ್ಟಿಯಾಯಿತು.

ಕೂಡಲೇ ಸ್ಥಳಕ್ಕೆ ಧಾವಿಸಿದ ಮುಲ್ಕಿ ನಪಂ ಮಾಜಿ ಸದಸ್ಯ ಬಶೀರ್ ಕುಳಾಯಿ, ಕಿಲ್ಪಾಡಿ ಗ್ರಾಪಂ ವಿಎ ಆಶ್ರಿತಾ ಶೆಟ್ಟಿ, ಮುಲ್ಕಿ ನಗರ ಪಂಚಾಯತ್ ಸಿಬ್ಬಂದಿ ನವೀನ್ ಚಂದ್ರ ಮತ್ತು ಮುಲ್ಕಿ ಮೆಸ್ಕಾಂ ಇಲಾಖೆಯ ಸಿಬ್ಬಂದಿ ನೀರು ಹಾಯಿಸಿ ಹೆಚ್ಚಿನ ಅನಾಹುತ ಆಗದಂತೆ ನೋಡಿಕೊಂಡರು.

ಈ ಪ್ರದೇಶ ಕಳೆದ ಕೆಲವು ವರ್ಷಗಳಿಂದ ಗಿಡಗಂಟೆಗಳಿಂದ ಗುಡ್ಡೆಯಂತಾಗಿದ್ದು ಮುಲ್ಕಿ ತಾಲೂಕು ನೂತನ ಕಛೇರಿ ನಿರ್ಮಾಣಕ್ಕೆ ಬಕಪಕ್ಷಿಯಂತೆ ಕಾಯುತ್ತಿದೆ.

Edited By : Nagesh Gaonkar
Kshetra Samachara

Kshetra Samachara

31/12/2021 04:32 pm

Cinque Terre

20.39 K

Cinque Terre

1

ಸಂಬಂಧಿತ ಸುದ್ದಿ