ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪೊಲೀಸರಿಗೆ ಉರಗ ರಕ್ಷಣೆ, ತರಬೇತಿ ಕಾರ್ಯಾಗಾರ

ಮಂಗಳೂರು: ಮನೆ ಪರಿಸರಕ್ಕೆ ಬಂದಿರುವ ಹಾಗೂ ಇನ್ನಾವುದೇ ಸಂದರ್ಭ ಎದುರಾಗುವ ಉರಗ ಹಿಡಿಯುವ ಮತ್ತು ರಕ್ಷಿಸುವ ಬಗ್ಗೆ ಪೊಲೀಸರಿಗೆ ತರಬೇತಿ ನೀಡಲಾಯಿತು.

ಮಂಗಳೂರಿನ ಅಸೈಗೋಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸರಿಗೆ ಈ ವಿಶೇಷ ತರಬೇತಿ ನೀಡಲಾಯಿತು. ಹಾವುಗಳನ್ನು ನಾಜೂಕಾಗಿ ಯಾವ ರೀತಿ ಹಿಡಿಯೋದು. ಹಾವು ಕಚ್ಚಿದಾಗ ಪ್ರಥಮ ಚಿಕಿತ್ಸೆ ಒದಗಿಸುವುದು ಹೇಗೆ, ತುರ್ತು ಸಂದರ್ಭ ಹಾವು ರಕ್ಷಣೆ ಬಗ್ಗೆ ತರಬೇತಿ ನೀಡಲಾಯಿತು.

ಉರಗ ರಕ್ಷಕ ಸ್ನೇಕ್ ಜಾಯ್ ಅವರು ಉರಗ ತರಬೇತಿ ನೀಡಿದರು. ಕರ್ನಾಟಕ ರಾಜ್ಯ ಪೊಲೀಸ್ 7ನೇ ಬೆಟಾಲಿಯನ್ ಕಮಾಂಡೆಂಟ್ ಬಿ.ಎಂ.ಪ್ರಸಾದ್ ಅವರ ಮುತುವರ್ಜಿಯಿಂದ ಈ ಕಾರ್ಯಕ್ರಮ ನಡೆಯಿತು.

Edited By : Manjunath H D
Kshetra Samachara

Kshetra Samachara

30/12/2021 02:14 pm

Cinque Terre

19.47 K

Cinque Terre

1

ಸಂಬಂಧಿತ ಸುದ್ದಿ