ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಭದಲ್ಲಿ ಸಾಲು ಚುಕ್ಕಿಗಳ ಜಾತ್ರೆ: ವಿಸ್ಮಯಕ್ಕೆ ಬೆರಗಾದ ಜನತೆ!

ಉಡುಪಿ: ಕರಾವಳಿಯ ಹಲವೆಡೆ ನಿನ್ನೆ ರಾತ್ರಿ ಆಗಸದಲ್ಲಿ ನಕ್ಷತ್ರಗಳ ಸರಮಾಲೆಯನ್ನು ನೋಡಿದ ಜನ ಬೆರಗುಗೊಂಡರು. ಬಾಹ್ಯಾಕಾಶದಲ್ಲಿ ಏಕಾಏಕಿ ಬೆಳಕಿನ ಸಾಲು ಹೀಗೆ ಹರಿದು ಹೋಗುತ್ತಿರುವುದನ್ನು ಕಂಡ ಜನ ಒಂದು ಕ್ಷಣ ಪುಳಕಗೊಂಡಿದ್ದಲ್ಲದೆ ಅಚ್ಚರಿಪಡುವಂತಾಯಿತು.

ಸರಳರೇಖೆಯಲ್ಲಿ ಹಾದುಹೋದ ನೂರಾರು ಬೆಳಕಿನ ಚುಕ್ಕಿಗಳು ಹಾದು ಹೋಗುವ ಈ ದೃಶ್ಯ ವನ್ನು

ಕುಂದಾಪುರ, ಮಲ್ಪೆ ,ಉಡುಪಿ ಮೊದಲಾದ ಪ್ರದೇಶದ ಜನರಿಂದ ವೀಕ್ಷಿಸಿದರು.ರಾತ್ರಿ ವೇಳೆ ಕರಾವಳಿ ಭಾಗದಲ್ಲಿ ಕಂಡು ಬಂದಿರುವ ಅಪರೂಪದ ವಿದ್ಯಮಾನದ ಬಗ್ಗೆ ಖಗೋಳ ಶಾಸ್ತ್ರಜ್ಞ ರು ಇದು ಕೃತಕ ಉಪಗ್ರಹಗಳ ಸಾಲು ಎಂದು ಅಂದಾಜಿಸಿದ್ದಾರೆ.

ಆದರೆ ಬಾಹ್ಯಾಕಾಶದಲ್ಲಿ ಹಾದು ಹೋಗಿರುವುದು ನಿಜವಾಗಿಯೂ ಏನು ಎನ್ನುವುದನ್ನು ವಿಜ್ಞಾನಿಗಳು ಸ್ಪಷ್ಟಪಡಿಸಬೇಕಿದೆ.

Edited By : Shivu K
Kshetra Samachara

Kshetra Samachara

21/12/2021 11:04 am

Cinque Terre

7.91 K

Cinque Terre

0