ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಬ್ರಹ್ಮಣ್ಯ: ಕೆರೆಯಲ್ಲಿದ್ದ ಮೊಸಳೆ ಅರಣ್ಯ ಸಿಬ್ಬಂದಿ ಬೊಗಸೆಗೆ; ಸುರಕ್ಷಿತ ತಾಣಕ್ಕೆ ರವಾನೆ

ಸುಬ್ರಹ್ಮಣ್ಯ: ಕಡಬ ತಾಲೂಕಿನ ಬಿಳಿನೆಲೆ ಕಿದು ಸಿಪಿಸಿಆರ್‌ಐ ಸಂಸ್ಥೆಯ ತೋಟದ ಕೆರೆಯಲ್ಲಿ ಕಂಡುಬಂದಿದ್ದ ಮೊಸಳೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದು ಸ್ಥಳಾಂತರಿಸಿದ ಘಟನೆ ಸುಬ್ರಹ್ಮಣ್ಯ ಸಮೀಪದ ಬಿಳಿನೆಲೆಯಲ್ಲಿ ನಡೆದಿದೆ.

ಇಲ್ಲಿನ ಕೆರೆಯೊಂದರಲ್ಲಿ ಹಲವು ಸಮಯದಿಂದ ಮೊಸಳೆ ಇರುವ ಬಗ್ಗೆ ಹಾಗೂ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳಾಂತರಿಸಲು ಅರಣ್ಯ ಇಲಾಖೆಗೆ ಸಿಪಿಸಿಆರ್‌ಐ ಸಂಸ್ಥೆಯವರು ವಿನಂತಿಸಿದ್ದರು.

ಆದ್ದರಿಂದ ಅರಣ್ಯ ಇಲಾಖೆಯವರು ಕೆರೆಯ ಬಳಿ ಎರಡು ದಿನಗಳ ಹಿಂದೆ ಬೋನು ಇರಿಸಿದ್ದರು. ಮೊಸಳೆ ಬೋನಿಗೆ ಬಿದ್ದಿದ್ದು, ಅಧಿಕಾರಿಗಳು ಬೋನಿನಲ್ಲಿದ್ದ ಮೊಸಳೆಯನ್ನು ಅಲ್ಲಿಂದ ಬೇರೆ ಕಡೆಗೆ ಸ್ಥಳಾಂತರಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

19/12/2021 09:46 pm

Cinque Terre

8.79 K

Cinque Terre

0

ಸಂಬಂಧಿತ ಸುದ್ದಿ