ಬ್ರಹ್ಮಾವರ : ಎಸ್. ಎಮ್. ಎಸ್ ಕಾಲೇಜು ಬ್ರಹ್ಮಾವರದ ಎನ್.ಸಿ.ಸಿ ಮತ್ತು ಮೇಜರ್ ಧ್ಯಾನ್ ಚಂದ್ ಕ್ರೀಡಾ ಸಂಘದ ವತಿಯಿಂದ ಕೋಟ ಕೋಡಿ ಕಡಲ ಕಿನಾರೆಯಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು.
25 ಎನ್.ಸಿ.ಸಿ ಕೆಡೆಟ್ಸ್ ಮತ್ತು ಕ್ರೀಡಾ ಸಂಘದ ವಿದ್ಯಾರ್ಥಿಗಳನ್ನೊಳಗೊಂಡ ತಂಡವು ಸುಮಾರು 20 ಕೆ.ಜಿ. ಪ್ಲಾಸ್ಟಿಕ್ ಮತ್ತು ಇನ್ನಿತರ ಕಸವನ್ನು ಸಂಗ್ರಹಿಸಿ ಸ್ವಚ್ಛಗೊಳಿಸಿದರು. ಜೊತೆಯಲ್ಲಿ ಕಡಲ ಕಿನಾರೆಗೆ ಬರುವ ಪ್ರವಾಸಿಗರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿಯನ್ನು ಮೂಡಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸನ್ನ ಶೆಟ್ಟಿ, ಕಛೇರಿ ಅಧೀಕ್ಷಕರಾದ ಡೇನಿಯಲ್ ಮೊಂತೆರೋ, ಎನ್.ಸಿ.ಸಿ ಅಧಿಕಾರಿಯಾದ ಲೆಫ್ಟಿನೆಂಟ್ ಅಶ್ವಿನ್ ಶೆಟ್ಟಿ ಎ., ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ವೆಂಕಟೇಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
08/12/2021 05:30 pm