ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕಾನರ್ಪ ಕುದೂರು ನಿವಾಸಿ ಸದಾಶಿವ ಎಂಬವರ ರಬ್ಬರ್ ತೋಟ ಸಮೀಪದ ತೋಡಿನಲ್ಲಿ 9 ಅಡಿ ಉದ್ದದ ಮೊಸಳೆ ಕಂಡುಬಂದಿದೆ!
ತೋಟದಲ್ಲಿ ಸೊಪ್ಪು ತೆರವುಗೊಳಿಸುವ ವೇಳೆ ಈ ಮೊಸಳೆ ಪತ್ತೆಯಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.
ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಮೊಸಳೆಯನ್ನು ಹಿಡಿದು, ಸುರಕ್ಷಿತವಾಗಿ
ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಕೊಂಡೊಯ್ದರು.
ಬೆಳ್ತಂಗಡಿ ತಾಲೂಕಿನ ಕಾಡಂಚಿನ ಹೊಳೆ, ತೊರೆಗಳಲ್ಲಿ ಮೊಸಳೆಗಳು ಆಗಾಗ ಕಂಡು ಬರುತ್ತಿವೆ.
Kshetra Samachara
05/12/2021 09:30 pm