ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟೇಶ್ವರ: 'ಕಡಲತೀರ ಸ್ವಚ್ಛತಾ ಅಭಿಯಾನ’; ಉಡುಪಿ ಜಿ.ಪಂ. ಸಿಇಒ ಭಾಗಿ

ಕುಂದಾಪುರ: 'ಕಡಲತೀರ ಸ್ವಚ್ಛತಾ ಅಭಿಯಾನ' ಕೋಟೇಶ್ವರ ಹಳೆಅಳಿವೆ ಬೀಚ್ ಸಮೀಪದ ಕೊಕರಿಸ್ ರೆಸಾರ್ಟ್ ಬಳಿ ಇಂದು ಬೆಳಗ್ಗೆ ನಡೆಯಿತು.

ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ಜಿಪಂ ಉಡುಪಿ, ಕರಾವಳಿ ಕಾವಲು ಠಾಣೆ ಗಂಗೊಳ್ಳಿ, ಗ್ರಾಪಂ ಕೋಟೇಶ್ವರ, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾ, ರಾಷ್ಟ್ರ ಸೇವಿಕಾ ಸಮಿತಿ ಉಡುಪಿ ಜಿಲ್ಲೆ ವತಿಯಿಂದ ಕಾರ್ಯಕ್ರಮ ಜರುಗಿತು.

ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಆಯೋಜನೆಯ 111ನೇ ವಾರದ ಬೀಚ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉಡುಪಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಮಾತನಾಡಿ, ‘ನಮ್ಮ ಕಸ, ನಮ್ಮ ಜವಾಬ್ದಾರಿ’ ಎಂಬ ಧ್ಯೇಯದೊಂದಿಗೆ ಸಮುದ್ರ ತೀರ ಸ್ವಚ್ಛತೆ ಮಾಡುತ್ತಿದ್ದು, ಪ್ರತಿಯೊಬ್ಬರೂ ಕಸವನ್ನು ಅವರೇ ನಿರ್ವಹಿಸಬೇಕು. ನದಿ ಮೂಲ ಅಥವಾ ಕಡಲಿಗೆ ಕಸ ಸೇರಬಾರದು. ಬದಲಾಗಿ ಸಂಬಂದಪಟ್ಟ ಎಸ್ ಎಲ್ ಆರ್ ಎಂ ಘಟಕಕ್ಕೆ ನೀಡಬೇಕು. ಮುಂದಿನ ದಿನಗಳಲ್ಲಿ ಗ್ರಾಪಂ ವತಿಯಿಂದ ಪ್ರತಿವಾರವೂ ಇಂತಹ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳುವ ಚಿಂತನೆಯಿದೆ. ಡಿ.2ರಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚರಣೆಯಿದೆ. ಅದಕ್ಕಾಗಿ ಸ್ವಚ್ಛತಾ ಸಪ್ತಾಹ ನಡೆಯಲಿದ್ದು, ಆ ಹಿನ್ನೆಲೆಯಲ್ಲಿ ಇಲ್ಲಿ ಚಾಲನೆ ನೀಡಲಾಗಿದೆ ಎಂದರು.

Edited By : Nagesh Gaonkar
Kshetra Samachara

Kshetra Samachara

28/11/2021 09:51 pm

Cinque Terre

16.99 K

Cinque Terre

1

ಸಂಬಂಧಿತ ಸುದ್ದಿ