ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಲ್ಪೆಯಲ್ಲಿ ಮಾರಾಟವಾದ ಈ ಮೀನಿನ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ಮಲ್ಪೆ: ಉಡುಪಿಯ ಮಲ್ಪೆ ಬಂದರಿನಲ್ಲಿ ಅಪರೂಪದ ಮಿನೊಂದು

ಲಕ್ಷಾಂತರ ರೂಪಾಯಿಗೆ ಮಾರಾಟವಾಗಿದೆ. ಗೋಳಿ ಮೀನು ಎಂದು ಸ್ಥಳೀಯವಾಗಿ ಕರೆಯಲ್ಪಡುವ ಅಪರೂಪದ ಮೀನು ಇದಾಗಿದ್ದು, 20 ಕೆಜಿ ತೂಕದ ಮೀನು ಕೆಜಿಯೊಂದಕ್ಕೆ 9060 ರಂತೆ,ಬರೋಬ್ಬರಿ 1,81,200 ರೂಗಳಿಗೆ ಮಾರಾಟವಾಗಿದೆ! ಮಲ್ಪೆಯಿಂದ ಸಮುದ್ರಕ್ಕೆ ತೆರಳಿದ್ದ ಬಲರಾಮ ಬೋಟ್‌ನಲ್ಲಿ ಮೀನುಗಾರರು ಬೀಸಿದ ಬಲೆಗೆ, ಗೋಳಿ ಮೀನು ಸಿಕ್ಕಿದ್ದು, ಹರಾಜು ಮೂಲಕ ಭರ್ಜರಿ ರೇಟ್‌ಗೆ ಮಾರಟವಾಯಿತು. ಗೋಳಿ ಮೀನು, ಬಹಳ ಅಪರೂಪದ ಮೀನಾಗಿದ್ದು ಔಷಧಿ ತಯಾರಿಕೆ ಬಳಕೆಯಾಗುತ್ತದೆ ಎನ್ನಲಾಗಿದೆ. ಮುಂಬೈನಲ್ಲಿ ಈ ಗೋಳಿ ಮೀನಿಗೆ ಹೆಚ್ಚಿನ ಬೇಡಿಕೆ ಇದ್ದು,ಸಮುದ್ರದ ನಡುವೆ ಇರುವ ಬಂಡೆಕಲ್ಲಿನ ಒಳಭಾಗದಲ್ಲಿ ಕಂಡು ಬರುತ್ತದೆ.

ಈ ಅಪರೂಪದ ಮೀನು ನೋಡಲು ಮಲ್ಪೆ ಬಂದರಿನಲ್ಲಿ ನೂರಾರು ಮಂದಿ ಸೇರಿದ್ದರು.

Edited By : Nagesh Gaonkar
Kshetra Samachara

Kshetra Samachara

23/11/2021 04:35 pm

Cinque Terre

14.42 K

Cinque Terre

2

ಸಂಬಂಧಿತ ಸುದ್ದಿ