ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಶನಿವಾರ ಭಾರಿ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ ಶನಿವಾರ ಬೆಳಿಗ್ಗೆ ಸುಮಾರು ಏಳು ಗಂಟೆ ಹೊತ್ತಿಗೆ ಏಕಾಏಕಿ ಮಳೆಸುರಿದಿದೆ. ಬಳಿಕ ಸಂಜೆ ಸುಮಾರು 5 ಗಂಟೆ ವರೆಗೆ ಮೋಡ ಕವಿದ ವಾತಾವರಣ ವಿದ್ದು ಸಂಜೆ 5 ಗಂಟೆಯಿಂದ ಭಾರಿ ಮಳೆ ಸುರಿದು ಕೆಲವೆಡೆ ಕೃತಕ ನೆರೆ ಸೃಷ್ಟಿಯಾಗಿದೆ.
ಸಂಜೆ ವೇಳೆ ಏಕಾಏಕಿ ಸುರಿದ ಬಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ 66 ಕ್ಷೀರಸಾಗರ, ಬಪ್ಪನಾಡು, ಮುಲ್ಕಿ ಬಸ್ಸುನಿಲ್ದಾಣದ ಬಳಿ, ಕಾರ್ನಾಡು ರಾಜ್ಯ ಹೆದ್ದಾರಿ ಒಳಚರಂಡಿ ವ್ಯವಸ್ಥೆ ಇಲ್ಲದೆ ಕೃತಕ ನೆರೆ ಉಂಟಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಬಪ್ಪನಾಡು ದೇವಸ್ಥಾನದ ಹೊರಾಂಗಣದಲ್ಲಿ ಮಳೆ ನೀರು ನಿಂತು ಭಕ್ತರಿಗೆ ತೊಂದರೆಯಾಯಿತು
ಮಳೆಯಿಂದಾಗಿ ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಕೆಲಹೊತ್ತು ವ್ಯಾಪಾರ ವಹಿವಾಟು, ಜನಜೀವನ ಅಸ್ತವ್ಯಸ್ತಗೊಂಡಿದ್ದು ಕೆಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಅಕಾಲಿಕ ಮಳೆಯಿಂದ ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಕೆಲವೆಡೆ ಬೆಳೆ ಹಾನಿ ಸಂಭವಿಸಿದ್ದು ಇನ್ನು ಕೆಲವು ಕಡೆ ಬೈಹುಲ್ಲು ಮಳೆಗೆ ಒದ್ದೆಯಾಗಿ ರೈತರಿಗೆ ನಷ್ಟ ಉಂಟಾಗಿದೆ.
ಶನಿವಾರ ಸಂಜೆ ಸುರಿದ ಮಳೆ ಮಳೆಗಾಲದಲ್ಲೂ ಇಂಥ ಮಳೆ ಬಂದಿರಲಿಲ್ಲ ಎಂದು ಕೃಷಿಕ ವಾಮನ್ ನಡಿಕುದ್ರು ಹೇಳಿದ್ದಾರೆ.
Kshetra Samachara
20/11/2021 09:52 pm