ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಕಾಲಿಕ ಮಳೆ ಎಫೆಕ್ಟ್; ಜಿಲ್ಲೆಯಲ್ಲಿ 86 ಹೆಕ್ಟೇರ್ ನಲ್ಲಿ ಭತ್ತ ಕೃಷಿ ನಾಶ!

ಕುಂದಾಪುರ: ಅಕಾಲಿಕ ಮಳೆಯಿಂದಾಗಿ ಉಡುಪಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದಲ್ಲಿ ಭತ್ತದ ಕೃಷಿ ಹಾನಿಯಾಗಿದೆ.ಉಡುಪಿ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರುವ ಅಕಾಲಿಕ ಮಳೆಗೆ 86 ಹೆಕ್ಟೇರ್ (215 ಎಕರೆ) ಪ್ರದೇಶದಲ್ಲಿನ ಭತ್ತ ಬೆಳೆ ನಾಶವಾಗಿದೆ.

ಇನ್ನು 3-4 ದಿನಗಳ ಕಾಲ ಜಿಲ್ಲೆಯ ಎಲ್ಲ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಪಡೆದು ಪರಿಹಾರ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕುಂದಾಪುರ ತಾಲೂಕಿನಲ್ಲೇ ಹೆಚ್ಚು ಹಾನಿ ಸಂಭವಿಸಿದೆ. ಕಳೆದ ಸೆಪ್ಟೆಂಬರ್ - ಅಕ್ಟೋಬರ್ ನಲ್ಲಿ ಅಂಪಾರು ಭಾಗದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪೈರು ಗದ್ದೆಯಲ್ಲೇ ಮಲಗಿದ್ದು, ಭತ್ತ ಮೊಳಕೆಯೊಡೆದಿದೆ. ಮಳೆ ಹಾನಿ ಬಗ್ಗೆ ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಕೃಷಿ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ಕೆಂಪೇಗೌಡ ತಿಳಿಸಿದ್ದಾರೆ.

Edited By : Shivu K
Kshetra Samachara

Kshetra Samachara

20/11/2021 04:11 pm

Cinque Terre

11.64 K

Cinque Terre

0

ಸಂಬಂಧಿತ ಸುದ್ದಿ