ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಾಡು ಏರಿ ಹೆಡೆ ಬಿಟ್ಟ ನಾಗರ; ಗುರುರಾಜನ 'ಕೈ ಸೆರೆ'

ಶಂಕರಪುರ: ಉಡುಪಿ ಜಿಲ್ಲೆಯ ಶಂಕರಪುರದಲ್ಲಿ ಮನೆ ಹೆಂಚಿನ ಮೇಲಿದ್ದ ನಾಗರ ಹಾವನ್ನು ಉರಗತಜ್ಞರೊಬ್ಬರು ರಕ್ಷಿಸಿ, ಸುರಕ್ಷಿತ ಸ್ಥಳದಲ್ಲಿ ಬಿಟ್ಟು ಬಂದಿದ್ದಾರೆ.

ಉತ್ತರಾಖಂಡದ ವ್ಯಕ್ತಿಯೊಬ್ಬ ಉಡುಪಿಯ ಶಂಕರಪುರಕ್ಕೆ ದುಡಿಮೆಗೆಂದು ಬಂದು, ಬಾಡಿಗೆ ಮನೆ ಮಾಡಿ ವಾಸವಾಗಿದ್ದ. ಈ ಮನೆಯ ಹೆಂಚಿನ ಮೇಲೆ ನಾಗರ ಹಾವೊಂದು ಓಡಾಡುತ್ತಾ, ಭಯಾತಂಕ ಹುಟ್ಟಿಸಿತ್ತು.

ವಿಷಪೂರಿತ ಹಾವನ್ನು ಗಮನಿಸಿದ ಮನೆ ಮಾಲೀಕರು, ಉರಗತಜ್ಞ ಗುರುರಾಜ್ ಸನಿಲ್ ಅವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಗುರುರಾಜ್, ಮಾಡು ಹತ್ತಿ ನಾಗರನನ್ನು ಸುಲಭವಾಗಿ ಹಿಡಿದು, ಸುರಕ್ಷಿತ ಸ್ಥಳದಲ್ಲಿ ಬಿಟ್ಟು ಬಂದರು.

Edited By : Shivu K
Kshetra Samachara

Kshetra Samachara

20/11/2021 11:26 am

Cinque Terre

14.76 K

Cinque Terre

0

ಸಂಬಂಧಿತ ಸುದ್ದಿ