ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬಟ್ಟೆ ಅಂಗಡಿಗೆ ನುಗ್ಗಿದ ಕನ್ನಡಿ ಹಾವು!; ಆತಂಕ ದೂರ ಮಾಡಿದ ಗುರುರಾಜ್ ಸನಿಲ್

ಅಂಬಾಗಿಲು: ದೊಡ್ಡ ಗಾತ್ರದ ಕನ್ನಡಿ ಹಾವೊಂದು ಬಟ್ಟೆ ಅಂಗಡಿಯೊಳಗೆ ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಷಿಸಿದ ಘಟನೆ ಉಡುಪಿಯ ಅಂಬಾಗಿಲು ಎಂಬಲ್ಲಿ ನಡೆದಿದೆ.

ಬಳಿಕ ಉರಗ ತಜ್ಞ ಗುರುರಾಜ್ ಸನಿಲ್ ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದರು. ಅಂಬಾಗಿಲಿನ ಬಟ್ಟೆ ಅಂಗಡಿಯಲ್ಲಿ ಈ ಹಾವು ಕಾಣಿಸಿಕೊಂಡಿತ್ತು. ಸಾಮಾನ್ಯವಾಗಿ ಕನ್ನಡಿ ಹಾವಿನ ಸಂಚಾರ ರಾತ್ರಿ ವೇಳೆ ಮಾತ್ರ. ಆದರೆ, ಈ ಹಾವು ಹಗಲಲ್ಲೇ ಇಲಿ ಮರಿಯೊಂದರ ಬೇಟೆಗಾಗಿ ಅಂಗಡಿಯೊಳಗೇ ಧಾವಿಸಿ ಬಂದಿತ್ತು. ಬಳಿಕ ಗುರುರಾಜ್ ಗೆ ಸುದ್ದಿ ಮುಟ್ಟಿಸಲಾಯಿತು. ಅವರು ಉಪಾಯವಾಗಿ ಹಿಡಿದು, ಸುರಕ್ಷಿತ ಸ್ಥಳಕ್ಕೆ ಬಿಡುವುದರೊಂದಿಗೆ ಆತಂಕ ದೂರವಾಯಿತು‌. ತುಳು ಭಾಷೆಯಲ್ಲಿ ಈ ಹಾವಿಗೆ ಕಂದೊಡಿ ಎಂದು ಹೇಳುತ್ತಾರೆ.

Edited By : Manjunath H D
Kshetra Samachara

Kshetra Samachara

01/11/2021 04:26 pm

Cinque Terre

19.16 K

Cinque Terre

0