ಬಜಪೆ : ಕಳೆದ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಳವೂರು ಗ್ರಾಮದ ಬೊಳಿಯ ಸೈಟ್ ನಲ್ಲಿ ತಡೆಗೋಡೆ ಕುಸಿದು ಎರಡು ಮನೆಗಳಿಗೆ ಹಾನಿಯಾಗಿದೆ.
ಸಂಜೀವ ಸಫಲಿಗ ಮತ್ತು ಹರೀಶ್ಚಂದ್ರ ಎಂಬವರ ಮನೆಯ ಪಕ್ಕದಲ್ಲಿ ಎರಡು ವರ್ಷದ ಹಿಂದೆ ಕಟ್ಟಿದ್ದ ತಡೆಗೋಡೆ ಕುಸಿದು ಮನೆಗಳಿಗೆ ಮತ್ತು ಎರಡು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ. ಕುಪ್ಪೆಪದವು ಗ್ರಾಮ ಪಂಚಾಯತ್ ನ ದೊಡ್ಡಳಿಕೆ ಎರ್ಮಾಳ ಎಂಬಲ್ಲಿ ಗಂಗಾಧರ್ ಎಂಬವರ ಮನೆಯ ಬಳಿ ಗುಡ್ಡ ಕುಸಿದು ಮನೆ ಅಪಾಯಕ್ಕೆ ಸಿಲುಕಿದೆ.
Kshetra Samachara
14/10/2021 12:15 pm