ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಸುರಿದ ವ್ಯಾಪಕ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು ಅಲ್ಪಸ್ವಲ್ಪ ಹಾನಿ ಸಂಭವಿಸಿದೆ.
ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಪಂಚ ಮಹಲ್ ಬಳಿ ವಿದ್ಯುತ್ ತಂತಿಗೆ ಮರಬಿದ್ದು ವಿದ್ಯುತ್ ಸಂಚಾರ ವ್ಯತ್ಯಯ ಗೊಂಡಿದೆ.
ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ಮಧ್ಯಾಹ್ನದ ಬಳಿಕ ಭಾರಿ ಮಳೆ ಸುರಿಯುತ್ತಿದ್ದು ಕೆಲಕಡೆ ಗದ್ದೆಯಲ್ಲಿ ಕೃತಕ ನೆರೆ ಉಂಟಾಗಿ ಬೆಳೆದುನಿಂತ ಪೈರಿಗೆ ಹಾನಿ ಸಂಭವಿಸಿದೆ.
ಭಾರಿ ಮಳೆಯಿಂದಾಗಿ ಮುಲ್ಕಿ ಬಸ್ಸುನಿಲ್ದಾಣದ ಬಳಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಹೆದ್ದಾರಿಯಲ್ಲಿ ಮಳೆ ನೀರು ಹರಿಯುತ್ತಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ ,ಮುಲ್ಕಿ ಕಾರ್ನಾಡು, ಕಿನ್ನಿಗೋಳಿ,-ಹಳೆಯಂಗಡಿ ಪೇಟೆ ಭಾರಿ ಮಳೆಗೆ ವ್ಯಾಪಾರ-ವಹಿವಾಟು ಕ್ಷೀಣಗೊಂಡು ಜನರಿಲ್ಲದೆ ಬಿಕೋ ಎನ್ನುತ್ತಿತ್ತು
ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹಿಂದೂ ಯುವಸೇನೆಯ ಶಾರದಾ ವಿಸರ್ಜನೆ ಮೆರವಣಿಗೆಗೆ ತೊಂದರೆ ಉಂಟಾಯಿತು.
Kshetra Samachara
12/10/2021 06:36 pm