ಮುಲ್ಕಿ: ಮುಲ್ಕಿ ಸಮೀಪದ ಪಕ್ಷಿಕೆರೆ ಶ್ರೀ ವಿನಾಯಕ ಮಿತ್ರ ಮಂಡಳಿ ನೇತೃತ್ವದಲ್ಲಿ ನೆಹರು ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ ಮಂಗಳೂರು, ಜಿಲ್ಲಾ ಆಡಳಿತ ದಕ್ಷಿಣ ಕನ್ನಡ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಕೆಮ್ರಾಲ್ ಗ್ರಾಮ ಪಂಚಾಯತ್ ಇದರ ಸಂಯುಕ್ತ ಆಶ್ರಯದಲ್ಲಿ "ಅಜಾದಿ ಕ ಅಮೃತ್ ಮಹೋತ್ಸವ್" ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಪಕ್ಷಿಕೆರೆ ಪೇಟೆಯಿಂದ ಸಂತ ಜೂದರ ಶಾಲೆಯವರೆಗೆ ಸ್ವಚ್ಛತೆಯನ್ನು ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಕೆಮ್ರಾಲ್ ಗ್ರಾ.ಪಂ ಅಧ್ಯಕ್ಷೆ ಲೀಲಾ ಕೃಷ್ಣಪ್ಪ, ಮಂಡಳಿಯ ಗೌರವಧ್ಯಕ್ಷ ಧನಂಜಯ ಪಿ ಶೆಟ್ಟಿಗಾರ್, ಮಂಡಳಿಯ ಅಧ್ಯಕ್ಷ ಚಂದ್ರಹಾಸ್ ಕುಂದರ್, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಹಾಗೂ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
Kshetra Samachara
10/10/2021 03:18 pm