ಬ್ರಹ್ಮಾವರ: ಬ್ರಹ್ಮಾವರ ಸಮೀಪದ ಮನೆಯೊಂದರಲ್ಲಿ ಚಿರತೆಯೊಂದು ಅವಿತು ಕುಳಿತ ಪ್ರಸಂಗ ನಡೆದಿದ್ದು ಮನೆಯವರೇ ಅದನ್ನು ಬಲೆಯಲ್ಲಿ ಬಂಧಿಸಿ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಬೋನಿಗೆ ಕೆಡವಿದ ಅಪರೂಪದ ಪ್ರಸಂಗ ನಡೆದಿದೆ!
ಬ್ರಹ್ಮಾವರದ ಚಾಂತಾರು ಸಮೀಪ ಕೃಷ್ಣಮೂರ್ತಿ ಕೆದಿಲಾಯ ಎಂಬವರ ಮನೆಯ ಬಳಿ ಚಿರತೆ ಬಂದಾಗ ಮನೆಯಲ್ಲಿರುವ ಬಲೆಯ ಮೂಲಕ ಅದನ್ನು ಮನೆಯವರೇ ಬಂಧಿಸಿದ್ದಾರೆ.ಬಳಿಕ ಬ್ರಹ್ಮಾವರ ಪೋಲೀಸ್ ಠಾಣಾಧಿಕಾರಿ ಮತ್ತು ಅರಣ್ಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಲಾಯಿತು. ಕೂಡಲೇ ವಲಯ ಅರಣ್ಯ ಅಧಿಕಾರಿ ಸುಬ್ರಹ್ಮಣ್ಯ ಆಚಾರ್ಯ, ಉಪ ವಲಯ ಅರಣ್ಯ ಅಧಿಕಾರಿ ಹರೀಶ್ ಕೆ. ಮತ್ತು ಗುರುರಾಜ್ ಅವರು ತಂಡದೊಂದಿಗೆ ಘಟನೆ ಸ್ಥಳಕ್ಕೆ ಬಂದು ಬೋನನ್ನು ಇರಿಸಿ ಒಂದು ವರ್ಷ ಪ್ರಾಯದ ಹೆಣ್ಣು ಚಿರತೆಯನ್ನು ಬೋನಿಗೆ ಕೆಡವಿದರು.
ಅರಣ್ಯ ಅಧಿಕಾರಿಗಳು ಚಿರತೆಯನ್ನು ಸಿದ್ದಾಪುರ ಬಳಿಯ ಹೊಸಂಗಡಿ ಅರಣ್ಯಕ್ಕೆ ಬಿಡುವುದರೊಂದಿಗೆ ಮನೆಯವರು ನಿಟ್ಟುಸಿರಿಡುವಂತಾಯಿತು.
Kshetra Samachara
30/09/2021 08:34 am