ಮುಲ್ಕಿ: ಹಳೆಯಂಗಡಿ ಸಮೀಪದ ಹತ್ತನೇ ತೋಕೂರು ಫೇಮಸ್ ಯೂತ್ ಕ್ಲಬ್ ಹಾಗೂ ವಿಶ್ವಬ್ಯಾಂಕ್ ಕುಡಿಯುವ ನೀರು ಯೋಜನೆ ಮತ್ತು ಪರಿಸರ ನೈರ್ಮಲ್ಯ ಸಮಿತಿ ಕ್ಲಸ್ಟರ್ 2, 10ನೇ ತೋಕೂರು ಗಂಗಾಕಲ್ಯಾಣ ಕುಡಿಯುವ ನೀರು ಸರಬರಾಜು ಸಮಿತಿ ತೋಕೂರು ಜಂಟಿ ಆಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಅಂಗವಾಗಿ "ಪರಿಸರ ನೈರ್ಮಲ್ಯ ಮತ್ತು ಶ್ರಮದಾನ" ತೋಕೂರು ಲೈಟ್ ಹೌಸ್ ಜಂಕ್ಷನ್ ನಿಂದ ಸುಬ್ರಹ್ಮಣ್ಯ ಹಿರಿಯ ಪ್ರಾಥಮಿಕ ಶಾಲೆ ವರೆಗೆ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಗುರುರಾಜ ಎಸ್ ಪೂಜಾರಿ ಮಾತನಾಡಿ ಮಹಾತ್ಮ ಗಾಂಧೀಜಿಯವರ ಸ್ವಚ್ಛತೆಯ ಪರಿಕಲ್ಪನೆಯನ್ನು ಯುವಜನರು ಗ್ರಾಮಗಳ ಅಭಿವೃದ್ಧಿಯಲ್ಲಿ ಅಳವಡಿಸಬೇಕು ಎಂದರು.
ವಿಶ್ವಬ್ಯಾಂಕ್ ಕುಡಿಯುವ ನೀರು ಯೋಜನೆಯ ಅಧ್ಯಕ್ಷ ಗಣೇಶ್ ಜಿ ಬಂಗೇರ, ಸದಸ್ಯ ದಿನಕರ ಸಾಲ್ಯಾನ್ ಮತ್ತು ಪಡುಪಣಂಬೂರು ಗ್ರಾಪಂ ಉಪಾಧ್ಯಕ್ಷೆ ಕುಸುಮ, ಸದಸ್ಯರಾದ ಮೋಹನ್ ದಾಸ್, ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ದೇವಾಡಿಗ, ಗಂಗಾಕಲ್ಯಾಣ ಕುಡಿಯುವ ನೀರು ಯೋಜನೆಯ ಸದಸ್ಯರಾದ ಹಿಮಕರ್ ಕೋಟ್ಯಾನ್ ಮತ್ತು ಫೇಮಸ್ ಯೂತ್ ಕ್ಲಬ್ಬಿನ ಅಧ್ಯಕ್ಷ ಭಾಸ್ಕರ್ ಅಮೀನ್ ಮತ್ತಿತರರು ಶ್ರಮಧಾನದಲ್ಲಿ ಭಾಗವಹಿಸಿದರು.
Kshetra Samachara
26/09/2021 02:43 pm