ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ತೊರಕೆ ಮೀನಿನ ಖಾದ್ಯ ವೈವಿಧ್ಯ: ಮಲೆಯಾಲಿ ಶೈಲಿಯ ಅಡುಗೆ ದೃಶ್ಯಾವಳಿ

ಮಂಗಳೂರು: ತಟ್ಟೆಯಾಕಾರ, ಈಟಿ ಬಾಲದ ತೊರಕೆ (sting ray) ಮೀನು ಕರಾವಳಿಗರಿಗೆ ಚಿರಪರಿಚಿತ. ಹಲವರಿಗೆ ತಿನ್ನಲು ಬಲು ಇಷ್ಟ, ಕೆಲವರಿಗೆ ಕಷ್ಟ. ಇನ್ನುಳಿದವರಿಗೆ ಅಷ್ಟಕಷ್ಟೇ. ಆಳಕಡಲ ವಾಸಿ ತೊರಕೆ ಮೀನಿನಲ್ಲಿ ನಾನಾ ಪ್ರಭೇದಗಳಿದ್ದು, ವಿವಿಧ ಬಣ್ಣಗಳಿಂದ ಗಮನ ಸೆಳೆಯುತ್ತವೆ. ಕೆಲವೊಮ್ಮೆ ಸಮುದ್ರ ತೀರ ಪ್ರದೇಶದ ನೀರಿನಲ್ಲಿಯೂ ಕಂಡು ಬರುತ್ತವೆ. ಕ್ರೊಕೊಡೈಲ್‌ ಹಂಟರ್‌ ಖ್ಯಾತಿಯ ಅಂತಾರಾಷ್ಟ್ರೀಯ ವನ್ಯಜೀವಿ ಚಲನಚಿತ್ರಕಾರ ಸ್ಟೀವ್‌ ಇರ್ವಿನ್‌ ಅವರು ಇದೇ ತೊರಕೆಯ ಚೂಪಾದ ಈಟಿಯಂತಿರುವ ಬಾಲದೇಟಿನಿಂದ ಮೃತಪಟ್ಟಿದ್ದರು.

ಕಡಲ ಒಡಲಲ್ಲಿ ತೊರಕೆಯ ಈಜಾಟದ ಪರಿ "ಹಾರುವ ತಟ್ಟೆ"ಯಂತೆಯೇ ಭಾಸವಾಗುತ್ತದೆ. ಸ್ವರಕ್ಷಣೆಗೆ ಬಾಲವೇ ಪ್ರಮುಖ ಆಯುಧ. ಈಟಿ- ಚಾಟಿಯಂತೆಯೂ ಬಾಲದ ಆಕಾರ ಬದಲಾಗುತ್ತವೆ. ಶತ್ರುವಿಗೆ ಆಘಾತ ನೀಡಲು ಬೆನ್ನ ಮೇಲೆಯೂ ಘಾತಕ ಮುಳ್ಳಿನ ಶಸ್ತ್ರವಿದೆ. ಸಮುದ್ರ ಶಿಕಾರಿಯಲ್ಲಿ ಸಿಗುವ ಸವಿರುಚಿಯ ಮತ್ಸ್ಯಗಳಲ್ಲಿ ತೊರಕೆ ಮೀನು ಕೂಡ ಒಂದು. ಅದರಲ್ಲೂ ಬೊಳ್ಕಲ್ಲಿನಿಂದ ಒಗ್ಗರಣೆ ಹಾಕಿದ ಪರಿಮಳಯುಕ್ತ ತೊರಕೆಯ ಪದಾರ್ಥ ಸವಿಯದ ಹಿರಿತಲೆಗಳು ಕರಾವಳಿಯಲ್ಲಿ ವಿರಳ. ಈಗೀಗ ತೊರಕೆ ಮೀನಿನ ವಿವಿಧ ಸಾರು, ಸುಕ್ಕ, ಚಿಲ್ಲಿ, ಫ್ರೈ ಇತ್ಯಾದಿ ಖಾದ್ಯ ವೈವಿಧ್ಯ ಮಾಂಸಾಹಾರಿಗಳ ನಾಲಿಗೆ ಚಪಲ ತಣಿಸುತ್ತಿವೆ. ಈ ವೀಡಿಯೊದಲ್ಲಿ ಮಲೆಯಾಳಿಗರ ಸಾಂಪ್ರದಾಯಿಕ ಶೈಲಿಯಲ್ಲಿನ ತೊರಕೆಯ ಅಡುಗೆ ದೃಶ್ಯಾವಳಿ ಕಾಣಬಹುದು.

Edited By : Nagesh Gaonkar
Kshetra Samachara

Kshetra Samachara

11/09/2021 06:37 pm

Cinque Terre

31.11 K

Cinque Terre

4