ಮುಲ್ಕಿ: ರಾಷ್ಟ್ರೀಯ ಹೆದ್ದಾರಿ66ರ ಕಾರ್ನಾಡ್ ಬೈಪಾಸ್ ಬೈಪಾಸ್ ನಿಂದ ಕಾರ್ನಾಡ್ ಪೇಟೆಯನ್ನು ಸಂಪರ್ಕಿಸುವ ರಸ್ತೆಯ ಧರ್ಮಸ್ಥಾನದ ಬಳಿ ಭಾರಿ ಗಾತ್ರದ ಹುಣಸೆ ಮರ ಹೆದ್ದಾರಿಗೆ ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು ಬೈಕ್ ಸವಾರ ಪವಾಡಸದೃಶ ಪಾರಾದ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ಈ ಸಂದರ್ಭ ಸ್ಥಳಕ್ಕೆ ನಪಂ ಸದಸ್ಯ ಪುತ್ತು ಬಾವ, ಮುಖ್ಯಾಧಿಕಾರಿ ಚಂದ್ರಪೂಜಾರಿ , ಪ್ರಕಾಶ್ ಹಾಗೂ ನವೀನ್ ಚಂದ್ರ ಹಾಗೂ ಸಿಬ್ಬಂದಿಗಳು ಧಾವಿಸಿ ತೆರವು ಗೊಳಿಸುವಲ್ಲಿ ತೆರವುಗೊಳಿಸುವಲ್ಲಿ ಕಾರ್ಯಪ್ರವೃತ್ತರಾದರು.
ಮರ ಬಿದ್ದು ಸ್ಥಳೀಯರಾದ ಅರವಿಂದ ಪೂಂಜ ಹಾಗೂ ಡಾ. ಶರತ್ ಶೆಟ್ಟಿ ಯವರ ಮನೆಯ ಆವರಣ ಗೋಡೆಗೆ ಹಾನಿಯಾಗಿದೆ. ಹುಣಸೆ ಮರ ವಿದ್ಯುತ್ ತಂತಿಗೆ ಬಿದ್ದಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ
ಮರ ಬೀಳುವ ಹೊತ್ತಿನಲ್ಲಿ ಬೆಳಗಿನ ಜಾವ ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಪವಾಡಸದೃಶ ಪಾರಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಮುಲ್ಕಿ ನಪಂ ಅಧ್ಯಕ್ಷ ಸುಭಾಷ್ ಶೆಟ್ಟಿ, ಉದ್ಯಮಿ ಸಾಮಾಜಿಕ ಕಾರ್ಯಕರ್ತ ರಾಲ್ಫಿ ಡಿಕೋಸ್ಟಾ, ಯುವ ಕಾಂಗ್ರೆಸ್ ನ ನಿಶ್ಚಿತ್ ಕೋಟ್ಯಾನ್ ಭೇಟಿ ನೀಡಿ ಪರಿಶೀಲಿಸಿದ್ದು ಮರ ತೆರವುಗೊಳಿಸಲು ಸಹಕರಿಸಿದ್ದಾರೆ.
Kshetra Samachara
03/09/2021 01:28 pm