ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ : ಮನೆಯೊಳಗೆ ಬಂಧಿಯಾಗಿದ್ದ ಕಾಳಿಂಗ ಸರ್ಪ, ಸ್ನೇಕ್ ಅಶೋಕ್ ಲಾಯಿಲರಿಂದ ರಕ್ಷಣೆ

ಬೆಳ್ತಂಗಡಿ : ಅಳದಂಗಡಿ ಸಮೀಪದ ನಾವರ ಗ್ರಾಮದ ಕೋಡೆಲ್ ಎಂಬಲ್ಲಿ ಹಳೆಯ ಮನೆಯೊಂದರಲ್ಲಿ ಕಳೆದ ಮೂರು ದಿನಗಳಿಂದ ಅವಿತಿದ್ದ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ಪ್ರೇಮಿ ಸೆರೆ ಹಿಡಿದಿದ್ದಾರೆ.

ನಾವರ ಗ್ರಾಮದ ಕೋಡೆಲು ಧರ್ಣಪ್ಪ ಮಲೆಕುಡಿಯರವರ ಹಳೆಯ ಮನೆಯಲ್ಲಿ ಮಳೆಗಾಲಕ್ಕೆ ಕಟ್ಟಿಗೆ ಸಂಗ್ರಹಿಸಲಾಗಿತ್ತು. ಇದರಲ್ಲಿ ಕಳೆದ ಮೂರು ದಿನಗಳಿಂದ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಅವಿತಿದ್ದು , ಮನೆಯವರು ಇಂದು, ನಾಳೆ ಹೋಗಬಹುದು ಎಂದು ತಿಳಿದಿದ್ದರು. ಆದರೆ ಅದು ಹೋಗದ ಕಾರಣ ವಿಚಾರವನ್ನು ಸ್ನೇಕ್ ಅಶೋಕ್ ಲಾಯಿಲ ರವರ ಗಮನಕ್ಕೆ ತರಲಾಯಿತು.

ಸ್ಥಳಕ್ಕೆ ತೆರಳಿದ ಅಶೋಕ್ ಅದನ್ನು ಸೆರೆ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಸ್ನೇಕ್ ಅಶೋಕ್ ಕೊರೊನಾ ಸಂಧರ್ಭ 30 ಕ್ಕೂ ಅಧಿಕ ಹಾವು ರಕ್ಷಣೆ ಮಾಡಿದ್ದಾರೆ.

Edited By : Shivu K
Kshetra Samachara

Kshetra Samachara

26/08/2021 03:41 pm

Cinque Terre

13.47 K

Cinque Terre

1

ಸಂಬಂಧಿತ ಸುದ್ದಿ