ಮುಲ್ಕಿ: ಅಕಾಲಿಕ ಮಳೆಗೆ ನಾನಾ ಕಡೆ ಹಾನಿ; ಮನೆ ಮೇಲೆ ಬಿದ್ದ ಮರ

ಮುಲ್ಕಿ: ಮುಲ್ಕಿ ಪರಿಸರದಲ್ಲಿ ಸೋಮವಾರ ರಾತ್ರಿ ಗುಡುಗು- ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಕೆಲವೆಡೆ ಹಾನಿ ಉಂಟಾಗಿದೆ.

ಬಿರುಮಳೆ, ಗಾಳಿಗೆ ಮುಲ್ಕಿ ಹೋಬಳಿಯ ಅತಿಕಾರಿಬೆಟ್ಟು ಗ್ರಾಪಂ ವ್ಯಾಪ್ತಿಯ ಮೈಲೊಟ್ಟು ಬಳಿ ಮೀನಾಕ್ಷಿ ಮೊಯಿಲಿ ಎಂಬವರ ಮನೆ ಮೇಲೆ ಗೇರುಮರ ಬಿದ್ದು ಜಖಂಗೊಂಡಿದೆ. ಸ್ಥಳಕ್ಕೆ ಅತಿಕಾರಿಬೆಟ್ಟು ಗ್ರಾಪಂ ಸದಸ್ಯ ದಯಾನಂದ ಮಟ್ಟು,ವಿಎ ಸುನಿಲ್ ಕುಮಾರ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.

ಮುಲ್ಕಿ ಹೋಬಳಿಯ ಕಿನ್ನಿಗೋಳಿ, ಹಳೆಯಂಗಡಿ, ಪಕ್ಷಿಕೆರೆ, ಪಡುಪಣಂಬೂರು, ಬಳ್ಕುಂಜೆ, ಪರಿಸರದಲ್ಲಿಯೂ ಸೋಮವಾರ ರಾತ್ರಿ ಗುಡುಗು ಸಹಿತ ಮಳೆಯಾಗಿದ್ದು, ಅಲ್ಲಲ್ಲಿ ಹಾನಿ ಉಂಟಾಗಿದೆ.

Kshetra Samachara

Kshetra Samachara

6 days ago

Cinque Terre

13.84 K

Cinque Terre

0