ಸುಳ್ಯ: ಕಲ್ಮಕಾರಿನಲ್ಲಿ ಕಾಡಾನೆ ದಾಳಿಗೆ ವಯೋವೃದ್ಧ ಮೃತ್ಯು

ಸುಳ್ಯ: ಕಾಡಾನೆ ದಾಳಿಗೆ ಒಳಗಾದ ಹಿರಿಯ ವ್ಯಕ್ತಿಯೋರ್ವರು ಗಂಭೀರ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೆ ಬಳಿಕ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಕಲ್ಮಕಾರಿನಲ್ಲಿ ನಡೆದಿದೆ.

ಕಲ್ಮಕ್ಕಾರಿನ ಮೆಂಟೆಕಜೆ ಶಿವರಾಮ ಗೌಡ(80) ಮೃತಪಟ್ಟವರು. ಅವರು ತನ್ನ ಮನೆಯ ತೋಟದ ಸಮೀಪ ನೀರಿನ ಪೈಪ್ ಸರಿ ಮಾಡಲೆಂದು ಹೋದ ಸಂದರ್ಭ ಕಾಡಾನೆ ದಾಳಿ ನಡೆಸಿದೆ.

ಶಿವರಾಮ ಗೌಡರು ಹಿಂತಿರುಗಿ ಬಾರದ ಕಾರಣ ಮನೆಯವರು ಹುಡುಕಾಟ ನಡೆಸಿದಾಗ ಆನೆ ದಾಳಿ ಮಾಡಿ ಅವರು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Kshetra Samachara

Kshetra Samachara

10 days ago

Cinque Terre

8.6 K

Cinque Terre

0