ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಅಕಾಲಿಕ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ ಇಂದು ಸಂಜೆ ಆರೂವರೆ ಸುಮಾರಿಗೆ ಪ್ರಾರಂಭಗೊಂಡ ಜಡಿಮಳೆ ಒಂದೇ ಸಮನೆ ಬರುತ್ತಿದೆ.
ಜಿಲ್ಲೆಯಾದ್ಯಂತ ದಿಡೀರ್ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸಂಜೆಯಾಗಿದ್ದರಿಂದ ಪಾದಚಾರಿಗಳು ,ವಾಹನ ಸವಾರರು ಸಾಕಷ್ಟು ಪರದಾಡಿದರು .
ಈ ಕ್ಷಣವೂ ಕೂಡ ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗುತ್ತಿದೆ ಸಾಮಾನ್ಯವಾಗಿ ಜನವರಿಯಲ್ಲಿ ಯಾವುದೇ ಕಾರಣಕ್ಕೂ ಮಳೆ ಆಗುವುದಿಲ್ಲ. ಆದರೆ ಅಕಾಲಿಕ ಜಡಿಮಳೆಗೆ ರಸ್ತೆಯಲ್ಲಿ ಮತ್ತು ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಈ ಮಳೆಯಿಂದಾಗಿ ಭತ್ತ ಸಹಿತ ತೆಂಗು, ಅಡಿಕೆ ಬೆಳೆಗೆ ಸಾಕಷ್ಟು ನಷ್ಟವಾಗುವ ಸಾಧ್ಯತೆ ಇದೆ.
Kshetra Samachara
06/01/2021 10:27 pm