ಮಂಗಳೂರು: ಶಿರಾಡಿ ಘಾಟ್ ಮತ್ತು ಮಂಗಳೂರು ಹೈವೇಯಲ್ಲಿ ಇಂದು ಮಧ್ಯಾಹ್ನ ಗಜರಾಜ ಪ್ರತ್ಯಕ್ಷನಾಗಿ, ರಸ್ತೆ ಮಧ್ಯಕ್ಕೆ ಬಂದು ವಾಹನ ಸವಾರರು ಭಯಗೊಂಡು ನಂತರ ಆನೆ ಆರ್ಭಟಕ್ಕೆ ವಾಹನ ಸವಾರರು ವಾಹನ ಬಿಟ್ಟು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ.
ಇಂದು ಮಧ್ಯಹ್ನಾ 12:30 ಸಮಯಕ್ಕೆ ಘಟನೆ ನಡೆದಿದ್ದು. ಕಳೆದ ಕೆಲದಿನಗಳಿಂದ ಕಾಡಾನೆ ರಸ್ತೆಗೆ ಬಂದು ವಾಹನಗಳಿಗೆ ಅಡ್ಡ ನಿಂತು ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡ್ತಿದೆ ಎಂದು ಹೇಳಲಾಗ್ತಿದೆ. ಇನ್ನೂ ಕಾಡಾನೆ ದಾಳಿಗೆ ಮಹಿಳೆಯೊಬ್ರು ಹೆದರಿ ಕೂದಲೆಳೆ ಅಂತರದಲ್ಲಿ ಪ್ರಾಣ ಉಳಿಸಿಕೊಂಡಿದ್ದಾರೆ.
Kshetra Samachara
16/04/2022 04:04 pm