ಉಡುಪಿ: ನಿನ್ನೆಯಿಂದ ಸುರಿಯುತ್ತಿರುವ ಮಳೆಗೆ ಉಡುಪಿ ನಗರದ ಹಲವೆಡೆ ನೆರೆ ನೀರು ನಿಂತಿದ್ದು ನಗರವಾಸಿಗಳು ಪರದಾಡುವಂತಾಗಿದೆ.
ಭಾರೀ ಗಾಳಿ ಮಳೆಗೆ ಕರಾವಳಿ ಬೈಪಾಸ್ ನಲ್ಲಿ ಮರವೊಂದು ಧರೆಗೆ ಉರುಳಿದೆ. ಇದರ ಪರಿಣಾಮವಾಗಿ ಕರಾವಳಿ ಬೈಪಾಸ್ ನಿಂದ ಮಲ್ಪೆಗೆ ಹೋಗುವ ರಸ್ತೆ ಸಂಚಾರ ಕಡಿತಗೊಂಡಿದೆ.
ಇದೀಗ ನೆಲಕ್ಕುರುಳಿದ ಮರ ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ.ಕಳೆದ ನಲ್ವತ್ತು ವರ್ಷಗಳಲ್ಲೇ ಉಡುಪಿ ಜನತೆ ಕಂಡಿರದ ನೆರೆಗೆ ಕೃಷ್ಣನಗರಿ ತುತ್ತಾಗಿದೆ.
Kshetra Samachara
20/09/2020 03:05 pm