ಉಡುಪಿ: ಉಡುಪಿಯ ಕೊಡವೂರು ಸಮೀಪದ ಇಂದ್ರಾಣಿ ನದಿಯಲ್ಲಿ ಬೃಹತ್ ಗಾತ್ರದ ಸಿಹಿನೀರಿನ ಮೀನೊಂದು ಗಾಳಕ್ಕೆ ಸಿಕ್ಕಿ ಅಚ್ಚರಿ ಮೂಡಿಸಿದೆ.
ಗಾಳಕ್ಕೆ ಸಾಮಾನ್ಯವಾಗಿ ಸಣ್ಣಪುಟ್ಟ ಮೀನುಗಳು ಸಿಗುವುದು ಮಾಮೂಲು. ಆದರೆ ಅಚ್ಚರಿ ಎಂಬಂತೆ ಸುಮಾರು 10 ಕೆ.ಜಿ. ತೂಕದ ಮುಗುಡು ಮೀನು ಗಾಳಕ್ಕೆ ಸಿಕ್ಕಿರುವುದು ಗಾಳ ಹಾಕಿದವನಿಗೂ ತುಂಬಾ ಖುಷಿ ಕೊಟ್ಟಿದೆ. ಸುಮಾರು ಮೂರೂವರೆ ಅಡಿ ಉದ್ದ ಇರುವ ಈ ಮೀನನ್ನು ತುಳುವಿನಲ್ಲಿ ಮುಗುಡು ಎಂದು ಕರೆದರೆ ಇಂಗ್ಲಿಷ್ ನಲ್ಲಿ ಕ್ಯಾಟ್ ಫಿಶ್ ಎನ್ನುತ್ತಾರ. ಬೆಕ್ಕಿನ ತರಹ ಮೀಸೆ ಹೊಂದಿರುವ ಮೀನು ಕನ್ನಡದಲ್ಲಿ ಬೆಕ್ಕುಮೀನು ಎಂದು ಜನಜನಿತ.
ತೋಡು, ತೊರೆ, ಕೆರೆಯಲ್ಲಿ ಹೆಚ್ಚಾಗಿ ಸಿಗುವ ಈ ಸಿಹಿನೀರ ಮೀನು ತನ್ನ ರುಚಿಯಿಂದಲೇ ಕರಾವಳಿಯಲ್ಲಿ ಫೇಮಸ್ಸಾಗಿದೆ. ನಗರ ಪ್ರದೇಶದಲ್ಲಿ ದುಬಾರಿ ರೇಟ್ ಗೆ ಈ ಮುಗುಡು ಮೀನು ಮಾರಾಟವಾಗುತ್ತೆ. ಗಾಳಕ್ಕೆ ಸಿಕ್ಕ ಬೃಹತ್ ಮುಗುಡು ಮೀನನ್ನು ನೋಡಲು ಮತ್ಸ್ಯ ಪ್ರಿಯರು ಮುಗಿಬಿದ್ದರು.
Kshetra Samachara
02/10/2020 01:57 pm