ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಕಮಲಶಿಲೆ ದೇಗುಲದ ಗರ್ಭಗುಡಿಗೆ ನದಿ ನೀರು:ಭಕ್ತರಲ್ಲಿ ಪುಳಕ ,ವಿಶೇಷ ಆರತಿ ಸೇವೆ

ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಕುಂದಾಪುರ ತಾಲೂಕಿನ ಕುಬ್ಜಾ ನದಿ ತುಂಬಿ ಹರಿಯುತ್ತಿದೆ. ವರ್ಷಂಪ್ರತಿಯಂತೆ ಈ ವರ್ಷವೂ ನದಿ ಪಕ್ಕದ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದ ಗರ್ಭಗುಡಿವರೆಗೆ ನದಿ ನೀರು ಹರಿದು ಬಂದಿದೆ.

ಇದೇ ಕ್ಷಣಕ್ಕೆ ಕಾಯುವ ಇಲ್ಲಿನ ಅರ್ಚಕರು ಗರ್ಭಗುಡಿಗೆ ನೀರು ಪ್ರವೇಶಿಸುತ್ತಿದ್ದಂತೆ ದೇವಿಗೆ ಆರತಿ ಬೆಳಗಿದರು. ಸ್ಥಳೀಯ ಭಕ್ತರು ಅರ್ಚಕರ ಸಮ್ಮುಖದಲ್ಲಿ ವಿಶೇಷ ಆರತಿ ಸೇವೆ ನಡೆಸಲಾಯಿತು.ಪ್ರತಿ ಮಳೆಗಾಲಕ್ಕೆ ನೆರೆ ನೀರು ಗರ್ಭಗುಡಿ‌ ಪ್ರವೇಶಿಸಿದಾಗ ಇಲ್ಲಿನ ಅರ್ಚಕರು ಮತ್ತು ಭಕ್ತರು ಪುಳಕಗೊಂಡು ವಿಶೇಷ ಪೂಜೆ ಸಲ್ಲಿಸುವ ಪದ್ಧತಿ ಇದೆ.

Edited By : Manjunath H D
Kshetra Samachara

Kshetra Samachara

05/07/2022 10:21 pm

Cinque Terre

7.16 K

Cinque Terre

0

ಸಂಬಂಧಿತ ಸುದ್ದಿ