ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಮಾಸ್ತಿ ಅಮ್ಮನವರ ದೇವಸ್ಥಾನದಲ್ಲಿ ಎರಡು ಬಾರಿ ಸೂರ್ಯ ರಶ್ಮಿ ಸ್ನಾನ: ಅಪರೂಪದ ವಿದ್ಯಮಾನ

ಬಾರ್ಕೂರು: ಬಾರಕೂರು ಧರ್ಮಶಾಲೆ ಶ್ರೀ ಮಾಸ್ತಿಅಮ್ಮನವರ ದೇವಸ್ಥಾನದಲ್ಲಿ ಉತ್ತರಾಯಣ ಮತ್ತು ದಕ್ಷಿಣಾಯಣ ಪರ್ವ ಕಾಲದಲ್ಲಿ ಎರಡು ಬಾರಿ ಸೂರ್ಯ ರಶ್ಮಿ ಸ್ನಾನ ಆಗಿದ್ದನ್ನು ಆಸ್ತಿಕರು ಗಮನಿಸಿದ್ದಾರೆ. ಈ ಬಾರಿ ಉತ್ತರಾಯಣದಂದು ಸಂಜೆ 6.00 ಗಂಟೆ ಸಮಯದಲ್ಲಿ ಆಗಿದ್ದು ಭಕ್ತರ ಪುಳಕಕ್ಕೆ ಕಾರಣವಾಗಿದೆ. ಇನ್ನು ಒಂದೆರಡು ದಿವಸ ಸಂಜೆ ಕಾಲದಲ್ಲಿ ಶ್ರೀ ದೇವರಿಗೆ ಸೂರ್ಯ ರಶ್ಮಿ ಸ್ನಾನ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ವಿದ್ವಾಂಸರು. ಹಾಗೆಯೇ ದಕ್ಷಿಣಾಯಣ ಕಾಲ ಅಕ್ಟೋಬರ್ 22 ,23 ರ ಸಮಯದಲ್ಲಿ ಆಗುವ ಸಾಧ್ಯತೆ ಇರುತ್ತದೆ ಎಂದು ಹೇಳಲಾಗುತ್ತದೆ.ಈ ವಿದ್ಯಮಾನ ಅಪರೂಪಕ್ಕೆ ಸಂಭವಿಸುತ್ತದೆ ಎನ್ನುತ್ತಾರೆ ದೇವಸ್ಥಾನದ ಅರ್ಚಕರು.

Edited By : Manjunath H D
Kshetra Samachara

Kshetra Samachara

30/04/2022 10:52 pm

Cinque Terre

13.59 K

Cinque Terre

0

ಸಂಬಂಧಿತ ಸುದ್ದಿ