ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪ್ರಕೃತಿ ಮಡಿಲಲ್ಲಿ ದೇವಸ್ಥಾನ

ವಿಶೇಷ ವರದಿ:

ಕುಂದಾಪುರ: ಕರ್ನಾಟಕದ ಕರಾವಳಿ ಭಾಗವಾದ ಉಡುಪಿಯಲ್ಲಿ ಅನೇಕ ಇತಿಹಾಸ ಪ್ರಸಿದ್ಧ ದೇವಸ್ಥಾನಗಳಿವೆ. ಅವುಗಳಲ್ಲಿ ಕಲ್ಲು ಗಣಪತಿ ದೇವಾಲಯ ಕೂಡ ಒಂದು. ಉಡುಪಿ ಜಿಲ್ಲೆಯ ಶಿರಿಯಾರದಲ್ಲಿ ಈ ಕಲ್ಲು ಗಣಪತಿ ದೇವಸ್ಥಾನವಿದ್ದು, ಉಡುಪಿಯಿಂದ 27 ಕಿ.ಮೀ., ಬ್ರಹ್ಮಾವರದಿಂದ 15 ಕಿ.ಮೀ., ಕುಂದಾಪುರದಿಂದ 22 ಕಿ.ಮೀ ದೂರದಲ್ಲಿದೆ. ಈ ದೇವಾಲಯವು ಪ್ರಕೃತಿ ನಿರ್ಮಿತವಾಗಿದ್ದು, ಇದು ಸುಮಾರು 500 ವರ್ಷಗಳಷ್ಟು ಪುರಾತನ ದೇವಾಲಯವಾಗಿದೆ.

ಕಲ್ಲು ಗಣಪತಿ ದೇವಾಲಯದಲ್ಲಿ ಗಣಪತಿಯು ತನ್ನ ತಂದೆ ತಾಯಿಯಾದ ಪರಮೇಶ್ವರ ಹಾಗೂ ಪಾರ್ವತಿಯ ಜೊತೆಗೆ ನೆಲೆ ನಿಂತಿದ್ದಾನೆ. ಕಲ್ಲು ಗಣಪತಿ ದೇವಾಲಯವು ಹಲವಾರು ಬಂಡೆಗಳಿಂದ ನಿರ್ಮಾಣಗೊಂಡಿದ್ದು, ಈ ಬಂಡೆಗಳ ಮಧ್ಯೆ ಮಧ್ಯೆ ಸಣ್ಣ ಪುಟ್ಟ ಗಿಡಗಳು ಬೆಳೆದಿವೆ. ಇದರಿಂದಲೇ ದೇಗುಲದ ಒಳಗಡೆ ಸದಾ ತಂಪಾಗಿರುತ್ತದೆ. ಈ ದೇವಾಲಯವನ್ನು ಪ್ರಕೃತಿ ದೇವಿಯೇ ನಿರ್ಮಾಣ ಮಾಡಿದ ಅದ್ಭುತ ಕಲಾ ಸೃಷ್ಟಿಯಾಗಿದೆ.

ಪರಮೇಶ್ವರ, ಪಾರ್ವತಿ ಹಾಗೂ ಗಣಪತಿ ಈ ಮೂರು ದೇವರುಗಳು ಒಂದೇ ಪೀಠದ ಮೇಲೆ ಇರುವುದು ಈ ಕಲ್ಲು ಗಣಪತಿ ದೇವಸ್ಥಾನದ ಪ್ರಮುಖ ವಿಶೇಷ. ಇನ್ನು ಕಲ್ಲು ಗಣಪತಿಯ ದರ್ಶನ ಪಡೆಯಲು ಸುಮಾರು 80 ಮೀಟರ್‌ಗಳಷ್ಟು ಕಲ್ಲು ಬಂಡೆಗಳ ನಡುವೆ ನುಸುಳಿಕೊಂಡು ಹೋಗಬೇಕು.

ಭಕ್ತಿಯಿಂದ ಬೇಡಿಕೊಂಡರೆ ನಮ್ಮ ಎಲ್ಲಾ ಕೋರಿಕೆಯನ್ನು ಈಡೇರಿಸುತ್ತಾನೆ ಎನ್ನುವುದು ಇಲ್ಲಿಗೆ ಬರುವ ಭಕ್ತರ ನಂಬಿಕೆಯಾಗಿದೆ. ಉದ್ಯೋಗ, ಆರ್ಥಿಕ, ವಿದ್ಯಾಭ್ಯಾಸ, ವಿವಾಹ ಹೀಗೆ ಮುಂತಾದ ಸಮಸ್ಯೆಗಳಿರುವವರು ಇಲ್ಲಿಗೆ ಬಂದು, ಗಣಪತಿಗೆ ಪ್ರಿಯವಾದ ತುಲಾಭಾರ, ರಂಗಪೂಜೆ ಅಥವಾ ಸತ್ಯ ಗಣಪತಿ ವೃತವನ್ನು ಮಾಡಿಸುತ್ತೇವೆ ನಮ್ಮ ಕಷ್ಟಗಳನ್ನು ಪರಿಹರಿಸು ಎಂದು ಬೇಡಿಕೊಂಡಲ್ಲಿ ಭಕ್ತರ ಕಷ್ಟಗಳನ್ನು ಪರಿಹಾರ ಮಾಡುತ್ತಾನೆ ಎನ್ನುವುದು ನಂಬಿಕೆಯಾಗಿದೆ.

Edited By :
Kshetra Samachara

Kshetra Samachara

04/04/2022 11:06 am

Cinque Terre

8.18 K

Cinque Terre

0

ಸಂಬಂಧಿತ ಸುದ್ದಿ