ಮುಲ್ಕಿ: ಶಾಂಭವಿ ಅಳಿವೆ ಬಾಗಿಲಿನ ಹೆಜಮಾಡಿ ಭಾಗದ ಮಂತ್ರ ಸರ್ಫ್ ಕ್ಲಬ್ ಸರ್ಫಿಂಗ್ ನಡೆಸುವ ಭಾಗದಲ್ಲಿ ಸುಮಾರು 2 ಕಿ.ಮೀ.ಗೂ ಅಧಿಕ ಭಾಗದಲ್ಲಿ ಸಂಗ್ರಹಗೊಂಡ ಕಸ ತ್ಯಾಜ್ಯ ಸ್ವಚ್ಛಗೊಳಿಸುವ ಮಂತ್ರ ಬೀಚ್ ಕ್ಲೀನ್ ಅಪ್ ಭಾನುವಾರ ರಾಜ್ಯೋತ್ಸವದಂದು ನಡೆಯಿತು.ಮಂಗಳೂರು ಯಂಗ್ ಇಂಡಿಯನ್ಸ್, ಸರ್ಫಿಂಗ್ ಸ್ವಾಮಿ ಫೌಂಡೇಶನ್, ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ, ಓರ್ಬ್ ಎನರ್ಜಿ ಮಂತ್ರ ಸರ್ಫ್ , ಸ್ಪಿನ್ ಡ್ರಿಫ್ಟ್ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡ ಬೀಚ್ ಕ್ಲೀನ್ ಅಪ್ ಕಾರ್ಯಕ್ರಮದಲ್ಲಿ ಹೆಜಮಾಡಿಯ ಕರಾವಳಿ ಕಾವಲು ಪೊಲೀಸ್ ಪಡೆ, ಪಡುಬಿದ್ರಿ ರೋಟರಿ ಕ್ಲಬ್, ಸುರತ್ಕಲ್ ನಾಗರಿಕ ಸಲಹಾ ಸಮಿತಿ, ಮುಲ್ಕಿ ಸ್ಕೌಟ್ಸ್ ಮತ್ತು ಗೈಡ್ಸ್ ನ 250ಕ್ಕೂ ಅಧಿಕ ಮಂದಿ ಭಾಗವಹಿಸಿ, ಬೀಚ್ ನಲ್ಲಿ ಸಂಗ್ರಹಗೊಂಡ ತ್ಯಾಜ್ಯಗಳ ಪೈಕಿ ಪ್ಲಾಸ್ಟಿಕ್, ರಬ್ಬರ್ ಮತ್ತು ಗ್ಲಾಸ್ ಸಂಗ್ರಹಿಸಿದರು.
350ಕ್ಕೂ ಅಧಿಕ ಗೋಣಿ ಚೀಲಗಳಲ್ಲಿ ಸಂಗ್ರಹಿಸಿದ ತ್ಯಾಜ್ಯಗಳನ್ನು ದೋಣಿ ಮೂಲಕ ಮುಲ್ಕಿಗೆ ಸಾಗಿಸಿ ಸಂಸ್ಕರಣಾ ಘಟಕಕ್ಕೆ ಕಳುಹಿಸಲಾಯಿತು.
ಕಳೆದ ಸೆಪ್ಟೆಂಬರ್ ನಲ್ಲಿ ಬೀಚ್ ಕ್ಲೀನ್ ಅಪ್ ನಡೆಸಲಾಗಿತ್ತು. ಮುಂದೆ ಪ್ರತಿ ಭಾನುವಾರ ದ.ಕ. ಜಿಲ್ಲೆಯ ಎಲ್ಲ ಬೀಚ್ ಗಳಲ್ಲಿ ವಿವಿಧ ಸಂಘಟನೆಗಳ ಜತೆಗೂಡಿ ಬೀಚ್ ಕ್ಲೀನ್ ಅಪ್ ನಡೆಯಲಿದೆ ಎಂದು ಶಮಂತ್ ಕುಮಾರ್ ತಿಳಿಸಿದ್ದಾರೆ. ಸರ್ಫಿಂಗ್ ಫೌಂಡೇಶನ್ ನಿರ್ದೇಶಕರುಗಳಾದ ಗೌರವ್ ಹೆಗ್ಡೆ ಮತ್ತು ಶಮಂತ್ ಕುಮಾರ್, ಮಂತ್ರ ಸರ್ಫ್ ಕ್ಲಬ್ ನ ಕಿರಣ್, ಕರಾವಳಿ ಕಾವಲು ಪೊಲೀಸ್ ಪಡೆಯ ಸಿಪಿಐ ರವೀಶ್ ನಾಯಕ್, ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ಕೇಶವ ಸಾಲ್ಯಾನ್, ಗಣೇಶ್ ಆಚಾರ್ಯ, ರಮೀಝ್ ಹುಸೈನ್, ಸಂತೋಷ್ ಪಡುಬಿದ್ರಿ, ಸುಧಾಕರ ಕೆ., ಲೋಹಿತಾಕ್ಷ ಸುವರ್ಣ, ನಾಗರಿಕ ಸಲಹಾ ಸಮಿತಿಯ ಡಾ.ಚಿತ್ರಲೇಖಾ, ಯಂಗ್ ಇಂಡಿಯನ್ಸ್ ಚೇರ್ ಪರ್ಸನ್ ದೀಕ್ಷಿತ್ ರೈ, ಕೋಚ್ ಆಶಿತ್, ಓರ್ಬ್ ಎನರ್ಜಿ ಕಂಪನಿಯ ಶರತ್, ಮಧುಕರ ಕುಡ್ವ, ಶರಣ್ ಶೆಟ್ಟಿ ಉಪಸ್ಥಿತರಿದ್ದರು.
Kshetra Samachara
01/11/2020 05:05 pm