ಉಡುಪಿ ನಗರದ ಹೊರವಲಯ ಪರ್ಕಳದ ದೇವಿ ನಗರದಲ್ಲಿ ಬೃಹತ್ ಪ್ರಮಾಣದಲ್ಲಿ ಆಫ್ರಿಕನ್ ತಳಿಯ ಬಸವನ ಹುಳದ ಬಾಧೆ ಕಾಣಿಸಿಕೊಂಡ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿ ಪ್ರಕಟಿಸಿತ್ತು. ಆದರೆ ಇದರ ಬಾಧೆ ಹೆಚ್ಚುತ್ತಲೇ ಇದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಪರ್ಕಳ ಬಿಎಂ ಸ್ಕೂಲ್‌ನ ಕಾಂಪೌಂಡ್, ಪುಟಾಣಿಗಳ ಅಂಗನವಾಡಿಯ ಗೋಡೆ ಹಾಗೂ ಪರ್ಕಳ ದೇವಿ ನಗರದ ಅಬ್ದುಲ್ ಸತ್ತಾರ್ ಅವರ ಮನೆಯ ಕಂಪೌಂಡ್ ಸುತ್ತಲೂ ಆಫ್ರಿಕನ್ ಮಾದರಿಯ ಬಸನ ಹುಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿವೆ.
ಕಳೆದ ವರ್ಷವೂ ಈ ಹುಳ ಬಾಧೆ ಕಾಣಿಸಿಕೊಂಡಿತ್ತು.ಆದರೆ ನಗರಸಭೆ ಯಾವುದೇ ಸೂಕ್ತ ಕ್ರಮ ಕೈಗೊಂಡಿರಲಿಲ್ಲ. ಈ ಹುಳವು ಸುರಿಸುವ ಎಂಜಲು ದುರ್ವಾಸನೆಯಿಂದ ಕೂಡಿದ್ದು, ರಾತ್ರಿಯ ಹೊತ್ತು ಶಬ್ದ ಮಾಡುತ್ತವೆ.ಮಳೆ ಬಂದಾಗ ಭೂಮಿಯ ಮೇಲೆ ಸಂಚರಿಸುತ್ತವೆ. ಮನೆಯ ಒಳಗೂ ಬರುತ್ತವೆ. ನಗರ ಸಭೆ ಆರೋಗ್ಯಾಧಿಕಾರಿಗಳು ಕೀಟನಾಶಕ ಸಿಂಪಡಿಸುವ ಮೂಲಕ ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಊರವರು ಒತ್ತಾಯಿಸಿದ್ದಾರೆ.
Kshetra Samachara
16/06/2022 03:55 pm