ಉಡುಪಿ ಜಿಲ್ಲೆಯ ಕಾಪು ನಗರದ ಗ್ರಂಥಾಲಯದ ಬಳಿ ಹೆಬ್ಬಾವು ಕಾಣಿಸಿಕೊಂಡು ಕೆಲ ಕಾಲ ಸ್ಥಳೀಯರ ಆತಂಕಕ್ಕೆ ಕಾರಣವಾಯಿತು. ಕಾಪು ನಗರದೆಲ್ಲೆಡೆ ಹೆಬ್ಬಾವಿನದ್ದೇ ಸುದ್ದಿ. ಸ್ಥಳಕ್ಕೆ ಅರಣ್ಯಾಧಿಕಾರಿಗಳನ್ನ ಕರೆಸಲಾಯಿತು. ಆದರೆ ಹೆಬ್ಬಾವು ಎಲ್ಲಿ ಎಂಬುದು ಮಾತ್ರ ಯಾರಿಗೂ ಗೊತ್ತಿಲ್ಲ! ಗ್ರಂಥಾಲಯದ ಪಕ್ಕ ದೊಡ್ಡ ಪೊದೆ ತುಂಬಿಕೊಂಡ ಕಾರಣ, ಹೆಬ್ಬಾವು ಹುಡುಕುವುದಕ್ಕೆ ಜೆಬಿಸಿ ಬರಬೇಕಾಯಿತು.
ಜೆಪಿಬಿ ಬಂದು ಪೊದೆ ಸರಿಸಿದಾಗ ಹೆಬ್ಬಾವು ಕಾಣ ಸಿಕ್ಕಿತ್ತು. ಬಳಿಕ ಸ್ಥಳೀಯ ಉರಗ ತಜ್ಞ ಶಿವಾನಂದ ಪೂಜಾರಿ ಸ್ಥಳಕ್ಕೆ ಆಗಮಿಸಿ ಹೆಬ್ಬಾವು ಹಿಡಿಯುವಲ್ಲಿ ಯಶಸ್ವಿಯಾದರು. ಅರಣ್ಯಾಧಿಕಾರಿಗಳು ನಗರದಲ್ಲಿ ಆತಂಕಕ್ಕೆ ಕಾರಣವಾದ ಹೆಬ್ಬಾವನ್ನು ತೆಗೆದುಕೊಂಡು ಹೋಗಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಇತ್ತ ಸ್ಥಳೀಯರು ನಿಟ್ಟುಸಿರು ಬಿಡುವಂತಾಯಿತು.
PublicNext
16/09/2022 08:38 pm