ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಜಡಿ ಮಳೆಗೆ ಮನೆ ಛಾವಣಿ ಕುಸಿತ,ಪ್ರಾಣಾಪಾಯದಿಂದ ಪಾರಾದ ದಂಪತಿ!

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಜಡಿ ಮಳೆಗೆ ಚೆಂಬುಗುಡ್ಡೆ ಅಂಬೇಡ್ಕರ್ ನಗರದ ಭಾಸ್ಕರ್ ಎಂಬುವರ ಮನೆಯ ಹಂಚಿನ ಛಾವಣಿ ಕುಸಿದು ಬಿದ್ದ ಘಟನೆ ಬುಧವಾರ ಮುಂಜಾನೆ ನಡೆದಿದ್ದು,ಕೋಣೆಯಲ್ಲಿ ಮಲಗಿದ್ದ ಭಾಸ್ಕರ್ ದಂಪತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಛಾವಣಿ ಕುಸಿದು ಬಿದ್ದ ವೇಳೆ ಭಾಸ್ಕರ್ ಮತ್ತು ಅವರ ಪತ್ನಿ ಕೋಣೆಯೊಳಗೆ ಮಲಗಿದ್ದು ಮಂಚದ ಪಕ್ಕಕ್ಕೆ ಹಂಚಿನ ರಾಶಿಯೇ ಬಿದ್ದಿದ್ದು ಭಾಸ್ಕರ್ ಅವರ ಕಾಲಿಗೆ ಗಾಯವಾಗಿದೆ.ದಂಪತಿ ಕೂದಲೆಲೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಮನೆಯಲ್ಲಿದ್ದ ಅವರ ಇಬ್ಬರು ಮಕ್ಕಳೂ ಅಪಾಯದಿಂದ ಪಾರಾಗಿದ್ದಾರೆ.

ಭಾಸ್ಕರ್ ಅವರದ್ದು ತೀರಾ ಬಡ ಕುಟುಂಬವಾಗಿದ್ದು ವಾಸವಿರಲು‌ ಇದೀಗ ಮನೆಯಿಲ್ಲದಂತಾಗಿದೆ.ಘಟನಾ ಸ್ಥಳಕ್ಕೆ ಶಾಸಕ ಯು.ಟಿ ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮನೆ ಕುಸಿದು ಬಿದ್ದರೆ ಮನೆಯ ಅಗತ್ಯ ಸಾಮಗ್ರಿಗಳು ಹಾಳಾಗಿರುತ್ತದೆ.ಈ ಕಾರಣದಿಂದ ತುರ್ತು ಪರಿಹಾರವಾಗಿ ಅಲ್ಪ ಮೊತ್ತ ಸರ್ಕಾರ ನೀಡಬೇಕು.

ಬಳಿಕ ಇಂಜಿನಿಯರ್ ಪರಿಶೀಲನೆ ನಡೆಸಿ ಪರಿಹಾರ ಮೊತ್ತ ನಿಗದಿ ಪಡಿಸಿ ಒದಗಿಸಬೇಕು. ಆದಷ್ಟು ಬೇಗ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ವ್ಯವಸ್ಥೆ ಮಾಡುತ್ತಾರೆ ಎಂದು ಹೇಳಿದರು. ಭಾಸ್ಕರ್ ಕುಟುಂಬಕ್ಕೆ ಐದು ಲಕ್ಷ ಪರಿಹಾರ ಘೋಷಣೆ ಮಾಡಿ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮನೆ ಒದಗಿಸುವ ಬಗ್ಗೆ ವ್ಯವಸ್ಥೆ ಮಾಡಲಾಗುವುದು ಎಂದು ತಹಶೀಲ್ದಾರ್ ಗುರುಪ್ರಸಾದ್ ಹೇಳಿದ್ದಾರೆ.

Edited By :
Kshetra Samachara

Kshetra Samachara

29/06/2022 04:16 pm

Cinque Terre

9.69 K

Cinque Terre

1

ಸಂಬಂಧಿತ ಸುದ್ದಿ