ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬೀಚ್‌ನಲ್ಲಿ ನೀರಿಗೆ ಇಳಿಯಬೇಡಿ; ಪ್ರವಾಸಿಗರಿಗೆ ಎಚ್ಚರಿಕೆ ಸಂದೇಶ.!

ಎರಡನೇ ಶನಿವಾರ, ಭಾನುವಾರ ಮತ್ತು ಸ್ವಾತಂತ್ರೋತ್ಸವದಿಂದಾಗಿ ಶನಿವಾರದಿಂದ ಮೂರು ದಿನ ಸಾರ್ವತ್ರಿಕ ರಜೆ ಇರುವುದರಿಂದ ಪ್ರವಾಸಕ್ಕೆ ತೆರಳುವವರ ಸಂಖ್ಯೆಯೂ ದಿಢೀರ್ ಆಗಿ ಏರಿಕೆಯಾಗುವ ಮೂಲಕ ವಿವಿಧ ಪ್ರವಾಸಿ ತಾಣಗಳು ಜನರಿಂದ ತುಂಬಿ ಹೋಗುವ ಸಾಧ್ಯತೆಯಿದೆ.

ಕರಾವಳಿಗೆ ದೂರದ ಜಿಲ್ಲೆಗಳಿಂದ ಬರುವವರು ಪ್ರಮುಖವಾಗಿ ಭೇಟಿ ನೀಡುವುದು ಇಲ್ಲಿನ ಬೀಚ್‌ಗಳಿಗೆ, ಆದರೆ ಸದ್ಯ ಬೀಚ್‌ಗಳಿಗೆ ತೆರಳುವವರಿಗೆ ನಿರಾಸೆ ಕಾದಿದೆ. ಕಡಲು ಪ್ರಕ್ಷುಬ್ಧವಾಗಿರುವುದರಿಂದ ಸಾರ್ವಜನಿಕರಿಗೆ ನೀರಿಗಿಳಿಯಲು ಅವಕಾಶವಿಲ್ಲ. ಬೀಚ್‌ಗಳನ್ನು ದೂರದಿಂದಲೇ ನೋಡಿ ಹಿಂತಿರುಗಬೇಕಷ್ಟೆ. ಉಡುಪಿಯ ಕಾಪು, ಪಡುಬಿದ್ರಿ, ಮಲ್ಪೆ, ಮರವಂತೆ ಸಹಿತ ಎಲ್ಲ ಪ್ರಮುಖ ಬೀಚ್‌ಗಳಲ್ಲಿ ಜನರು ನೀರಿಗೆ ಇಳಿಯದಂತೆ ಎಚ್ಚರಿಕೆ ವಹಿಸಲಾಗಿದೆ. ಹೆಚ್ಚಿನ ಕಡೆ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಹಗ್ಗ ಕಟ್ಟಲಾಗಿದೆ. ಅದನ್ನು ಮೀರಿ ನೀರಿಗೆ ಇಳಿಯುತ್ತೇವೆ ಎಂದು ಹೋದರೆ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಲಾಗಿದೆ.

Edited By :
Kshetra Samachara

Kshetra Samachara

13/08/2022 05:37 pm

Cinque Terre

4.88 K

Cinque Terre

0

ಸಂಬಂಧಿತ ಸುದ್ದಿ