ಪಶ್ಚಿಮ ಘಟ್ಟ ಪ್ರದೇಶದ ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯ ನಾರಾವಿ ಭಾಗದಲ್ಲಿ ಭಾರಿ ಮಳೆಯಾಗಿದೆ. ನಿನ್ನೆ ಸಂಜೆ ವೇಳೆಗೆ ಭಾರಿ ಸ್ಪೋಟದ ಸದ್ದು ಕೇಳಿ ಬಂದ ಬಳಿಕ ಸತತವಾಗಿ ಮಳೆ ಸುರಿದಿದೆ. ಇದರ ಬೆನ್ನಲ್ಲೇ ಸುವರ್ಣ ನದಿಯಲ್ಲಿ ಕೆಸರು ಮಿಶ್ರಿತ ನೀರು ಹರಿಯುತ್ತಿತ್ತು ಎನ್ನಲಾಗಿದೆ.
ಸದ್ಯ ಸ್ಥಳೀಯರು ತಿಳಿಸುವಂತೆ, ಭಾರಿ ಮಳೆ ಹಿನ್ನಲೆಯಲ್ಲಿ ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯಲ್ಲಿ ಭೂಕುಸಿತವಾಗಿರುವ ಸಾಧ್ಯತೆ ಇದ್ದು, ಘಟ್ಟದಿಂದ ಹರಿದು ಬಂದ ನೀರು ಕುಸಿತವಾಗಿರುವ ಮಣ್ಣಿನ ಕೆಸರು ಸೇರಿ ನದಿಯಲ್ಲಿ ಹರಿಯುತ್ತಿದೆ.
ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಈ ಭಾಗದ ಪರಿಶೀಲನೆ ತೆರವುದು ಕಷ್ಟ ಸಾಧ್ಯವಾಗಿರುವ ಕಾರಣ ಸ್ಪಷ್ಟ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ.
ನೂರಾಲ್ಬೆಟ್ಟು, ನಾರಾವಿ, ಕುತ್ಲೂರು , ಈದು ಮೂರು ಗ್ರಾಮಗಳು 90% ಅರಣ್ಯ ಪ್ರದೇಶಗಳಿಂದ ಅವೃತವಾದ ಪ್ರದೇಶಗಳಾಗಿವೆ. ನಾರಾವಿ ಸೂರ್ಯ ನಾರಾಯಣ ದೇವಸ್ಥಾನದ ಬಳಿ ಹರಿಯುತ್ತಿರುವ ಸುವರ್ಣ ನದಿಯಲ್ಲಿ ಏಕಾಏಕಿ ಪ್ರವಾಹ ಉಂಟಾಗಿದ್ದು ದೇವಾಲಯ ರಸ್ತೆ ಸಂಪೂರ್ಣ ಜಲಾವೃತವಾಗಿದೆ.
ಇನ್ನು ಮಳೆಯಿಂದಾಗಿ ಕಾರ್ಕಳ ಬೆಳ್ತಂಗಡಿ ರಾಜ್ಯ ಹೆದ್ದಾರಿಯ ನಾರಾವಿಯ ಅರಸನಕಟ್ಟೆ ಎಂಬಲ್ಲಿ ಸೇತುವೆ ಮೇಲ್ಭಾಗದಲ್ಲಿ ನೀರು ಹರಿದು ಸಂಪರ್ಕ ಕಷ್ಟವಾಗಿದೆ. ಬಿರ್ಮೊಟ್ಟು, ರಾಮೆರಗುತ್ತು ಸುತ್ತಮುತ್ತ , ನಾರಾವಿಯ ಕೆಳಗಿನ ಪೇಟೆಯ ಸುತ್ತಮುತ್ತಲಿನ ತೋಟಗಳಿಗೂ ನೀರು ನುಗ್ಗಿದೆ.
Kshetra Samachara
04/08/2022 02:52 pm