ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಆಳಕಡಲಲ್ಲಿ ತೂಫಾನ್ ಹಿನ್ನೆಲೆ; ದಡಕ್ಕೆ ದೌಡಾಯಿಸುತ್ತಿರುವ ಬೋಟ್ ಗಳು

ಮಂಗಳೂರು: ಜೋರುಗಾಳಿ, ಬಿರುಮಳೆಯಿಂದಾಗಿ ಸಮುದ್ರದಲ್ಲಿ ಎದ್ದ ತೂಫಾನ್ ನಿಂದಾಗಿ ನೂರಕ್ಕೂ ಅಧಿಕ ಆಳಸಮುದ್ರ(deep sea) ಮೀನುಗಾರಿಕೆ ಬೋಟ್ ಗಳು ಮಂಗಳೂರು ದಕ್ಕೆಗೆ ಹಿಂತಿರುಗುತ್ತಿವೆ.

ಮಂಗಳೂರು ಅಳಿವೆಬಾಗಿಲಲ್ಲಿ ಈ ಬೋಟ್ ಗಳು ಆಳಸಮುದ್ರದಿಂದ ಇಂದು ಬೆಳಗ್ಗೆ ಸಾಲುಸಾಲಾಗಿ ದಕ್ಕೆಗೆ ವಾಪಸ್ ಆಗುತ್ತಿರುವ ದೃಶ್ಯ ಕಂಡು ಬಂತು. ಹಿಂದಕ್ಕೊತ್ತುತ್ತಿದ್ದ ಗಾಳಿ, ಮಳೆಯ ಪ್ರಹಾರದ ಜತೆ ಕಡಲಲೆಗಳ ಪ್ರಾಣಾಘಾತ ಹೊಡೆತ ಎದುರಿಸಿ, ನೂರಕ್ಕೂ ಹೆಚ್ಚು ಆಳಕಡಲ ಬೋಟ್ ಗಳು ಇಂದು ದಡ ಸೇರಿವೆ.

ಸಾಮಾನ್ಯವಾಗಿ ಈ ಒಂದೊಂದು ಬೋಟ್ ನಲ್ಲಿ 7ರಿಂದ 9 ಮೀನುಗಾರರಿರುತ್ತಾರೆ. ಅವರು 8ರಿಂದ 10 ದಿನಗಳ ವರೆಗೆ ಆಳಕಡಲಲ್ಲಿ ಮೀನುಗಾರಿಕೆ ನಡೆಸಿ, ಬಳಿಕ ದಕ್ಕೆಗೆ ಮರಳುತ್ತಾರೆ.

ಇದೀಗ 3-4 ದಿನಗಳಿಂದ ಕಾಡುತ್ತಿರುವ ಗಾಳಿ, ಮಳೆಯ ಅಬ್ಬರದ ಪರಿಣಾಮದಿಂದ ಆಳಕಡಲಲ್ಲಿ ಎದ್ದಿರುವ ತೂಫಾನ್ ಭೀತಿಯಿಂದಾಗಿ ಆಳಸಮುದ್ರ ಬೋಟ್ ಗಳು ಅನಿವಾರ್ಯವಾಗಿ ತೀರದತ್ತ ಮುಖ ಮಾಡುವಂತಾಗಿದೆ.

Edited By : Nagesh Gaonkar
Kshetra Samachara

Kshetra Samachara

21/09/2020 12:17 pm

Cinque Terre

28.06 K

Cinque Terre

1