ಮಂಗಳೂರು: ಸುರತ್ಕಲ್‌ನಿಂದ ಸುಮಾರು 280 ನಾಟಿಕಲ್ ಮೈಲು ದೂರದಲ್ಲಿ ಅರಬಿ ಸಮುದ್ರದಲ್ಲಿ ಪನಾಮಾ ದೇಶದ ಹಡಗಿನಲ್ಲಿದ್ದ ಚೀನಾದ ಪ್ರಜೆ ಮೇ 10 ರಂದು ನಾಪತ್ತೆಯಾಗಿದ್ದಾರೆ. ಮಂಗಳೂರು ಹಡಗಿನಲ್ಲಿ ಕೆಲಸ ಮಾಡುತ್ತಿದ್ದ ಚೀನಾ ದೇಶದ ನಾವಿಕನೋರ್ವ ಅರಬ್ಬಿ ಸಮುದ್ರದಲ್ಲಿ ನಾಪತ್ತೆಯಾದ ಬಗ್ಗೆ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚೀನಾದ ಪ್ರಜೆ ಕ್ಷು ಜುನ್ ಫೆಂಗ್ (52) ಅರಬ್ಬಿ ಸಮುದ್ರದಲ್ಲಿ ನಾಪತ್ತೆಯಾದವರು.
ಮಂಗಳೂರಿನ ಸುರತ್ಕಲ್‌ನಿಂದ ಸುಮಾರು 280 ನಾಟಿಕಲ್ ಮೈಲ್ ದೂರದಲ್ಲಿ ಇವರು ನಾಪತ್ತೆಯಾಗಿದ್ದಾರೆ. ಮೇ 10 ರಂದು ಅರಬ್ಬಿ ಸಮುದ್ರದಲ್ಲಿ ಪನಾಮಾ ದೇಶದ ಹಡಗಿನಲ್ಲಿ ನಸುಕಿನ ಜಾವ 1.30 ಗಂಟೆಗೆ ನಾಪತ್ತೆಯಾಗಿದ್ದು, ಇಂಡಿಯನ್ ಕೋಸ್ಟ್ ಗಾರ್ಡ್ ಡೆಪ್ಯೂಟಿ ಕಮಾಂಡೆಂಟ್ ಭುವನೇಶ್ ಕುಮಾರ್ ಅವರು ಮೇ 28 ರಂದು ಕರಾವಳಿ ಕಾವಲು ಪೊಲೀಸ್ ಠಾಣೆಗೆ ಫ್ಯಾಕ್ಸ್ ಸಂದೇಶದ ಮೂಲಕ ದೂರು ನೀಡಿದ್ದಾರೆ.
Kshetra Samachara
05/06/2022 08:53 pm