ಬ್ರಹ್ಮಾವರ: ಪೇಜಾವರ ವಿಶ್ವ ಪ್ರಸನ್ನ ತೀರ್ಥರಿಗೆ ಪ್ರಾಣಿಗಳು ಅಂದರೆ ವಿಶೇಷ ಪ್ರೀತಿ. ಉಡುಪಿ ಸಮೀಪದ ಬ್ರಹ್ಮಾವರದ ನೀಲಾವರ ಗೋಶಾಲೆಯಲ್ಲಿ ಶ್ರೀಗಳು ಸಾವಿರಾರು ದೇಸೀ ತಳಿಯ ಗೋವುಗಳನ್ನು ಸಾಕಿ ಸಲಹುತ್ತಿದ್ದಾರೆ. ಸರಕಾರವೂ ಇದಕ್ಕೆ ನೆರವು ನೀಡುತ್ತಾ ಬಂದಿದೆ. ನೀಲಾವರ ಗೋಶಾಲೆಯಲ್ಲಿ ಎರಡು ಆಡುಗಳನ್ನು ಶ್ರೀಗಳು ಸಾಕುತ್ತಿದ್ದಾರೆ. ಪ್ರೀತಿಯ ಆಡು ಪೇಜಾವರ ಶ್ರೀಗಳ ಎದೆಯ ಮೇಲೆ ತನ್ನ ಎರಡೂ ಕಾಲುಗಳನ್ನಿಟ್ಟು ಸೊಪ್ಪು ತಿನ್ನುತ್ತಿರುವ ವೀಡಿಯೋ ಸಖತ್ ವೈರಲ್ ಆಗಿದ್ದಲ್ಲದೇ ಪ್ರಾಣಿಪ್ರಿಯರ ಗಮನ ಸೆಳೆಯುತ್ತಿದೆ.
ಪೇಜಾವರ ಶ್ರೀಗಳು ನೀಲಾವರ ಗೋಶಾಲೆಯಲ್ಲಿದ್ದಾಗಲೆಲ್ಲ ಆಡುಗಳಿಗೆ ಆಹಾರ ತಿನ್ನಿಸುತ್ತಾ ಅವುಗಳನ್ನು ಮುದ್ದು ಮಾಡುತ್ತಾರೆ. ಇತ್ತೀಚೆಗೆ ನೀಲಾವರ ಗೋಶಾಲೆಗೆ ಬಂದಾಗ ಆಡಿಗೆ ಸೊಪ್ಪು ನೀಡಿದಾಗ ಆಡು ಪೇಜಾವರ ಶ್ರೀಗಳ ಎದೆ ಮೇಲೆ ತನ್ನ ಎರಡೂ ಕಾಲನ್ನಿಟ್ಟು, ಸೊಪ್ಪು ತಿನ್ನುತ್ತಿತ್ತು. ಇದನ್ನು ಸ್ಥಳದಲ್ಲೇ ಇದ್ದ ಭಕ್ತರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ.
Kshetra Samachara
14/09/2022 03:33 pm