ಮಲ್ಪೆ: ಉಡುಪಿಯ ಕಲಾವಿದ ಹರೀಶ್ ಸಾಗಾ ವಿಶೇಷ ಸಂದರ್ಭಗಳಲ್ಲಿ ಮರಳು ಶಿಲ್ಪ ರಚಿಸುವುದರಲ್ಲಿ ಪ್ರಸಿದ್ಧರು. ಈ ಬಾರಿ
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮತ್ತು ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜದ ಆಚರಣೆಯ ಸಂಭ್ರಮವನ್ನು ಸಾರುವ ಮರಳು ಶಿಲ್ಪ ಕಲಾಕೃತಿಯನ್ನು ಮಲ್ಪೆ ಕಡಲ ಕಿನಾರೆಯಲ್ಲಿ ರಚಿಸಿದ್ದಾರೆ. ಸ್ಯಾಂಡ್ ಥೀಂ ಉಡುಪಿಯ ತಂಡದ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಪ್ರಸಾದ್ ಆರ್. 'ವಂದೇ ಮಾತರಂ' ಧೈಯದೊಂದಿಗೆ ಈ ಕಲಾಕೃತಿಯನ್ನು ರಚಿಸಿದರು. ದೇಶ ಪ್ರೇಮವನ್ನು ಸಾರುವ ಈ ಈ ಕಲಾಕೃತಿಯು ತೆರೆಗಳ ಸಮ್ಮುಖದಲ್ಲಿ ಸುಂದರವಾಗಿ ಕಾಣುತ್ತಿದ್ದು ಬೀಚ್‌ಗೆ ಆಗಮಿಸುವ ಪ್ರವಾಸಿಗರ ಗಮನ ಸೆಳೆಯುತ್ತಿದೆ.
PublicNext
12/08/2022 12:10 pm