ಮಣಿಪಾಲ: ಕೇವಲ ಮನುಷ್ಯರಿಗಷ್ಟೇ ಅಲ್ಲದೇ ಪ್ರಾಣಿ ಪಕ್ಷಿಗಳಿಗೂ ಮಿಡಿಯುವ ಹಲವು ಜನ ನಮ್ಮ ನಡುವೆ ಇದ್ದಾರೆ. ಪ್ರಾಣಿಗಳಿಗೆ ಅನಾರೋಗ್ಯವಾದಾಗ, ಅವು ಸಾವನ್ನಪ್ಪಿದಾಗ ಆರೈಕೆ ಮಾಡುವ ಸಮಾಜಸೇವಕ ನಿತ್ಯಾನಂದ ಒಳಕಾಡು, ಕೋತಿಯೊಂದನ್ನು ಆರೈಕೆ ಮಾಡಿದ್ದಾರೆ.
ಈ ಕೋತಿಯು ವಿಷಾಹಾರ ಸೇವನೆ ಮಾಡಿ ಆರೋಗ್ಯ ಹಾಳುಮಾಡಿಕೊಂಡಿತ್ತು. ನಿತ್ಯಾನಂದರು ಕೋತಿಯನ್ನು ಪಶುವೈದ್ಯ ಡಾ.ದಯಾನಂದ ಪೈ ಅವರಲ್ಲಿಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಚೇತರಿಕೆಗಾಗಿ ಮಂಗವನ್ನು ಮಣಿಪಾಲದಲ್ಲಿರುವ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕಿನಲ್ಲಿ ಆಶ್ರಯ ಒದಗಿಸಲಾಯಿತು. ಮಂಗವು ಗುಣಮುಖವಾದ ಬಳಿಕ ಅದರ ಹಿಂದಿನ ವಾಸಸ್ಥಾನಕ್ಕೆ ಬಿಡಲಾಗುತ್ತದೆ ಎಂದು ಅರಣ್ಯರಕ್ಷಕರು ತಿಳಿಸಿದ್ದಾರೆ.
Kshetra Samachara
19/07/2022 08:58 pm